ಒಲಂಪಿಕ್ಸ್ ನಲ್ಲಿ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ – ಭಾರತಕ್ಕೆ ಚಿನ್ನದ ಪದಕ!

139
firstsuddi

ಟೋಕಿಯೋ : ಒಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಎರಡನೇ ಎಸೆತದಲ್ಲೇ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು, ದಿಗ್ಗಜರನ್ನೇ ಮೀರಿಸಿದ್ದು, ಈ ಮೂಲಕ ಹೊಸ ರೆಕಾರ್ಡ್ ಬರೆದಿದ್ದಾರೆ. ಅಥ್ಲೀಟ್ಸ್ ನಲ್ಲಿ ಭಾರತಕ್ಕೆ ಬಂದಿರುವ ಎರಡನೇ ಪದಕ ಇದಾಗಿದೆ.

ಈ ಹಿಂದೆ 2008ರ ಬೀಜಿಂಗ್ ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆದ್ದಿದ್ದರು. ಇದೀಗ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಎರಡನೇ ಆಟಗಾರನಾಗಿ ನೀರಜ್ ಚೋಪ್ರಾ ಹೊರಹೊಮ್ಮಿದ್ದಾರೆ.