ಓಮಿಕ್ರಾನ್ ಉಪತಳಿ ಬಿಎ.2 ಅತ್ಯಂತ ವೇಗವಾಗಿ ಹರಡಬಲ್ಲದು : ಡಬ್ಲ್ಯುಹೆಚ್ಒ.

69
firstsuddi

ಬರ್ನ್ : ಓಮಿಕ್ರಾನ್ ಉಪತಳಿ ಬಿಎ.2 ಅತ್ಯಂತ ವೇಗವಾಗಿ ಹರಡಬಲ್ಲ ಸಾಂಕ್ರಾಮಿಕ ರೋಗವಾಗಿದೆ. ಇಲ್ಲಿಯವರೆಗೆ ವಿಶ್ವದ 57 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ತಿಳಿಸಿದೆ.

ಓಮಿಕ್ರಾನ್ ಪ್ರಕರಣಗಳಲ್ಲಿ ಶೇ.96 ರಷ್ಟು ಪಾಲನ್ನು ಮೊದಲ ಬಾರಿಗೆ ಗುರುತಿಸಿದ ಆವೃತ್ತಿಗಳಾದ ಬಿಎ.1 ಹಾಗೂ ಬಿಎ.1.1ಗಳೇ ಹೊಂದಿವೆ. ಆದರೆ ಬಿಎ.2 ಪ್ರಕರಣಗಳಲ್ಲಿ ಸ್ಪಷ್ಟ ಏರಿಕೆ ಕಂಡುಬರುತ್ತಿದ್ದು, ಇದು ತೀವ್ರ ಗತಿಯಲ್ಲಿ ಇನ್ನೂ ಹಲವು ಉಪ-ರೂಪಾಂತರಿಗಳನ್ನು ಹುಟ್ಟು ಹಾಕುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ವರದಿಯ ಪ್ರಕಾರ, ಲಸಿಕೆ ಪಡೆಯದ ವ್ಯಕ್ತಿಗಳಲ್ಲಿ ಬಿಎ.2 ಅಪಾಯ ಹೆಚ್ಚು. ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದರೆ ಬಿಎ.2 ಮತ್ತು ಬಿಎ.1 ರೀತಿಯ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.