ಕದ್ದು ತಂದಿದ್ದ ಜೆಸಿಬಿ ಮೂಲಕ ಎಟಿಎಂ ದರೋಡೆಗೆ ಯತ್ನ…

42
firstsuddi

ಶಿವಮೊಗ್ಗ: ಕದ್ದು ತಂದಿದ್ದ ಜೆಸಿಬಿ ಮೂಲಕ ಖದೀಮರು ಎಟಿಎಂ ದರೋಡೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ವಿನೋಬನಗರ ಬಡಾವಣೆಯಲ್ಲಿ ನಡೆದಿದೆ.

ಎಟಿಎಂ ದರೋಡೆಗೆ ಜೆಸಿಬಿಯನ್ನು ಕದ್ದು ತಂದಿದ್ದ ದುಷ್ಕರ್ಮಿಗಳು ಆಕ್ಸಿಸ್ ಬ್ಯಾಂಕಿನ ಎಟಿಎಂ ದರೋಡೆಗೆ ಯತ್ನಿಸಿದ್ದಾರೆ. ಆದರೆ ರಾತ್ರಿ ಗಸ್ತು ಪೊಲೀಸರು ಬರುತ್ತಿದ್ದಂತೆ ಸ್ಥಳದಲ್ಲೇ ಜೆಸಿಬಿ ಬಿಟ್ಟು ಪರಾರಿಯಾಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.