ಕನಿಷ್ಟ ತಿಳುವಳಿಕೆ ಇಲ್ಲದವರು ಶಾಸಕರಾಗಿ ಮೆರೆಯೋದಕ್ಕೆ ಬರುತ್ತೀರಾ? : ರಮೇಶ್ ಕುಮಾರ್…

349
firstsuddi

ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅತೃಪ್ತ ಶಾಸಕರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ಅವರು ನೋಟಿಸ್ ನೀಡಿದ್ದರು. ಆದರೆ ಶಾಸಕರು ಈ ವೇಳೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಈ ಕುರಿತು ಗರಂ ಆಗಿರುವ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರಿಗೆ ತಿಳುವಳಿಕೆ ಇಲ್ಲ. ಯಾವ ರೀತಿ ರಾಜೀನಾಮೆ ನೀಡಬೇಕು ಎಂದು ಕೂಡಾ ಗೊತ್ತಿಲ್ಲ. ಕನಿಷ್ಟ ತಿಳುವಳಿಕೆ  ಇಲ್ಲದವರು ಶಾಸಕರಾಗಿ ಮೆರೆಯೋದಕ್ಕೆ ಬರುತ್ತೀರಾ? ಸ್ಪೀಕರ್ ಯಾಕೆ ನೋಟೀಸ್ ನೀಡುತ್ತಾರೆ ಎನ್ನುವುದು ಕೂಡಾ ಶಾಸಕರಿಗೆ ಗೊತ್ತಿಲ್ಲ. ಸದನದ ಕಲಾಪಕ್ಕೆ ಹಾಜರಾಗುವುದು ಬಿಡುವುದು ಅವರ ಇಷ್ಟ ನಾನೇನು ಮಾಡುವುದಕ್ಕಾಗಲ್ಲ. ನನ್ನ ಕರ್ತವ್ಯ ನಾನು ಮಾಡುತ್ತೇನೆ ಎಂದು ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.