ಕರಾವಳಿಗೆ ಕೊರೋನಾ ಸುನಾಮಿ!; ದುಬೈನಿಂದ ಬಂದ 14 ಮಂದಿ ಸೇರಿ 16 ಪಾಸಿಟಿವ್ ಪ್ರಕರಣಗಳು ದೃಢ…?

150
firstsuddi

ಮಂಗಳೂರು: ಮಹಾಮಾರಿ ಕೊರೋನಾಕ್ಕೆ ಮಂಗಳೂರು ತತ್ತರಿಸಿದ್ದು, ಒಂದೇ ದಿನ ಬರೋಬ್ಬರಿ ಹದಿನಾರು ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಮೇ 12 ರಂದು ರಾತ್ರಿ ದುಬಾಯಿ ನಿಂದ ಬಂದ ಪ್ರಯಾಣಿಕರಲ್ಲಿ 14 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡರೆ ಉಳಿದ ಎರಡು ಪ್ರಕರಣಗಳು ಫಸ್ಟ್ ನ್ಯೂರೊ ಆಸ್ಪತ್ರೆಗೆ ಸೇರಿದ್ದಾಗಿದೆ.

ದುಬೈನಿಂದ ಹಿಂದಿರುಗಿದ ಕೆಲವರು ಜಿಲ್ಲಾಧಿಕಾರಿಯು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಕ್ವಾರಂಟೈನ್ ನಲ್ಲಿ ಅವರು ಒದಗಿಸಿದ ಸೌಲಭ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇನ್ನೂ ಕೆಲವರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ವೈದ್ಯಕೀಯ ತಪಾಸಣೆಗಾಗಿ ಭೇಟಿ ನೀಡಿದಾಗ ಅವರೊಂದಿಗೆ ಸಹಕರಿಸಲಿಲ್ಲ ಎಂದು ತಿಳಿದುಬಂದಿತ್ತು.

ಮೇ 15 ರಂದು, ದುಬೈನಿಂದ ಹಿಂದಿರುಗಿದ ಹದಿನಾಲ್ಕು ಜನರು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ಮಂಗಳೂರಿನಲ್ಲಿ ಭಾರತ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದಾಗಿ ಅವರು ಸಹಿ ಹಾಕಿದ್ದರಿಂದ ಜಿಲ್ಲಾಡಳಿತ ದುಬೈ ಮರಳಿದವರ ಕ್ವಾರಂಟೈನ್ ಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿತ್ತು. ಆದರೆ ಅವರು ಮಂಗಳೂರು ತಲುಪಿದ ಕೂಡಲೇ, ಕೆಲವೊಂದು ವ್ಯಕ್ತಿಗಳು ವ್ಯವಸ್ಥೆಗಳ ಬಗ್ಗೆ ದೂರು ನೀಡಲು ಆರಂಭಿಸಿದ್ದರು.