ಕರ್ತವ್ಯ ನಿರತರಾಗಿದ್ದ ಹಾಸನದ ಸಿಆರ್‌ಪಿಎಫ್‌ ಯೋಧ ಹೃದಯಾಘಾತದಿಂದ ಸಾವು…

232
firstsuddi

ಹಾಸನ : ಕರ್ತವ್ಯ ನಿರತರಾಗಿದ್ದ ವೇಳೆ ಸಿಆರ್‌ಪಿಎಫ್ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಛತ್ತೀಸ್‍ಗಢದ ಸುಕ್ಮಾದಲ್ಲಿ ನಡೆದಿದೆ. ಹಾಸನ ತಾಲ್ಲೂಕಿನ ಈಚಲಹಳ್ಳಿ ಗ್ರಾಮದ ನಿವಾಸಿ ಹೇಮಂತ್ ಕುಮಾರ್(42) ಮೃತ ಯೋಧ ಎಂದು ಗುರುತಿಸಲಾಗಿದ್ದು, ಸಿಆರ್‌ಪಿಎಫ್ ನ 150ನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹೇಮಂತ್ ಕುಮಾರ್ ಅವರು ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ಕರ್ತವ್ಯನಿರತರಾಗಿದ್ದ ವೇಲೇ ಹೃದಯಾಘಾತ ಸಂಭವಿಸಿದ್ದು, ಇನ್ನೆರಡು ತಿಂಗಳು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಮನೆಗೆ ವಾಪಸ್ ಬರುವುದಾಗಿ ಹೇಳಿ ತೆರಳಿದ್ದ ಯೋಧ ಹೇಮಂತ್ ಕುಮಾರ್ ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ. ಯೋಧನ ಮೃತದೇಹ ನಾಳೆ ಅಥವಾ ನಾಡಿದ್ದು ಹಾಸನಕ್ಕೆ ಆಗಮಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.