ಕರ್ತವ್ಯ ಲೋಪ ಹಿನ್ನಲೆ- ಅಶೋಕನಗರ ಇನ್ಸ್ ಪೆಕ್ಟರ್ ಸಸ್ಪೆಂಡ್…

65
firstsuddi

ಬೆಂಗಳೂರು: ಕರ್ತವ್ಯ ಲೋಪ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರನ್ನು ಅಮಾನತುಗೊಳಿಸಿ ನಗರದ ಪೊಲೀಸ್ ಕಮಿಷನರ್ ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ.

ಅಶೋಕನಗರ ಇನ್ಸ್ ಪೆಕ್ಟರ್ ಶ್ರೀಕಾಂತ್ ತೋಟಗಿಯವರನ್ನು ಸಸ್ಪೆಂಡ್ ಮಾಡಿ ಪೊಲೀಸ್ ಕಮಿಷನರ್ ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ. ಠಾಣಾ ವ್ಯಾಪ್ತಿಯ ದಿ ಪ್ರೈಡ್ ಹೋಟೆಲ್ ಮೇಲೆ ಸಿಸಿಬಿ ತಂಡ ಇತ್ತೀಚೆಗೆ ದಾಳಿ ಮಾಡಿತ್ತು. ದಾಳಿ ವೇಳೆ ಹೋಟೆಲ್‌ನಲ್ಲಿ ಯುವತಿಯರನ್ನು ಕರೆತಂದು ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ಆರೋಪಗಳು ಕೇಳಿಬಂದಿದ್ದವು.

ಸಾಕಷ್ಟು ದಿನಗಳಿಂದ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಇನ್ಸ್ ಪೆಕ್ಟರ್ ಕ್ರಮಕೈಗೊಳ್ಳದ ಬಗ್ಗೆ ಸಿಸಿಬಿ ವರದಿ ನೀಡಿತ್ತು. ವರದಿ ಆಧರಿಸಿ ತನಿಖೆ ನಡೆಸಿ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಅವರು ಇನ್ಸ್ ಪೆಕ್ಟರ್ ವಿರುದ್ಧ ಕಮಿಷನರ್‌ಗೆ ರಿಪೋರ್ಟ್ ನೀಡಿದ್ದರು.

ರಿಪೋರ್ಟ್ ಪರಿಶೀಲಿಸಿದ ಕಮಿಷನರ್ ದಯಾನಂದ್ ಇದೀಗ ಕರ್ತವ್ಯ ಲೋಪದ ಹಿನ್ನಲೆ ಅಶೋಕನಗರ ಇನ್ಸ್ ಪೆಕ್ಟರ್ ಶ್ರೀಕಾಂತ್ ತೋಟಗಿಯವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.