ಕರ್ತವ್ಯಕ್ಕೆ ತೆರಳುತ್ತಿದ್ದ ಗದಗದ ಯೋಧ ರೈಲಿನ ಅಡಿ ಸಿಲುಕಿ ಸಾವು…

182
firstsuddi

ಗದಗ : ಕರ್ತವ್ಯಕ್ಕೆ ಹಾಜರಾಗಲು ತೆರಳಿದ್ದ ಯೋಧ ರೈಲಿನ ಅಡಿ ಸಿಲುಕಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆ ರೈಲು ನಿಲ್ದಾಣದಲ್ಲಿ ನಡೆದಿದೆ. ಜಿಲ್ಲೆಯ ಮುಳಗುಂದ ಪಟ್ಟಣದ ಬಸವರಾಜ್ ಹಿರೇಮಠ(38) ಮೃತ ಯೋಧ ಎಂದು ಗುರುತಿಸಲಾಗಿದ್ದು, ಬಸವರಾಜ್ ಅವರು ಕಳೆದ 15ದಿನಗಳ ಹಿಂದೆ ರಜೆಗೆಂದು ಊರಿಗೆ ಬಂದಿದ್ದರು. ರಜೆ ಕಳೆದು ಪುನಃ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ವೇಳೆ ರೈಲು ಇಳಿಯುವ ಸಂದರ್ಭದಲ್ಲಿ ಕಾಲು ಜಾರಿ ರೈಲಿನ ಅಡಿ ಸಿಲುಕಿ ಮೃತಪಟ್ಟಿದ್ದಾರೆ. ಬಸವರಾಜ್ ಅವರು ಕಳೆದ 14ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವರು ಕರ್ತವ್ಯದಿಂದ ನಿವೃತ್ತಿಯಾಗಲು ಕೇವಲ 9ತಿಂಗಳು ಬಾಕಿ ಉಳಿದಿತ್ತು ಎನ್ನಲಾಗಿದ್ದು, ಪುಣೆ ಸೇನಾ ಸಿಗ್ನಲ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.