ಬೆಂಗಳೂರು: ಕರ್ತವ್ಯದ ವೇಳೆ ನಿದ್ರೆಯಲ್ಲಿದ್ದ ಇಬ್ಬರು ಕಾನ್ಸ್ಟೇಬಲ್ ಗಳನ್ನು ಅಮಾನತುಗೊಳಿಸಿ ವೈಟ್ಫೀಲ್ಡ್ ಡಿಸಿಪಿ ಎಸ್.ಗಿರೀಶ್ ಆದೇಶ ಹೊರಡಿಸಿದ್ದಾರೆ.
ಮಹದೇವಪುರ ಪೊಲೀಸ್ ಠಾಣೆ ಕಾನ್ಸ್ಟೇಬಲ್ ಈರಪ್ಪ ಉಂಡು, ಹೆಡ್ ಕಾನ್ಸ್ಟೇಬಲ್ ಎ.ಎನ್.ಜಯರಾಮ್ ಅಮಾನತುಗೊಂಡವರು. ಡಿಸಿಪಿ ಗಸ್ತು ವೇಳೆ ನಿದ್ರೆಯಲ್ಲಿದ್ದ ಮಹದೇವಪುರ ಠಾಣೆಯ ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ.
ಕಾನ್ಸ್ಟೇಬಲ್ ಈರಪ್ಪ ಉಂಡು, ಹೆಡ್ ಕಾನ್ಸ್ಟೇಬಲ್ ಎ.ಎನ್.ಜಯರಾಮ್ ರಾತ್ರಿ ಪಾಳಿಯಲ್ಲಿದ್ದರು. ಆಗ ರಾತ್ರಿ ಗಸ್ತಿನಲ್ಲಿದ್ದ ಸಿಎಆರ್ ಡಿಸಿಪಿ ಅವರು, ಮಹದೇವಪುರ ಠಾಣೆಗೆ ತೆರಳಿದ್ದರು. ಆ ವೇಳೆ ಇಬ್ಬರು ಪೊಲೀಸರು ನಿದ್ರೆ ಮಾಡುತ್ತಿದ್ದನ್ನು ಗಮನಿಸಿದ ಸಿಎಆರ್ ಡಿಸಿಪಿ ಅವರು, ಮರುದಿನ ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅವರಿಗೆ ವರದಿ ನೀಡಿದ್ದರು. ನಗರ ಸಶಸ್ತ್ರ ಪಡೆ ಡಿಸಿಪಿ ವರದಿ ಆಧರಿಸಿ ಕಾನ್ಸ್ಟೇಬಲ್ ಗಳ ಅಮಾನತುಗೊಳಿಸಿ ಆದೇಶ ನೀಡಲಾಗಿದೆ.










