ಕಳಸ : ಘನ ತ್ಯಾಜ್ಯ ನಿರ್ವಹಣೆಯನ್ನು ಸಾಧಿಸುವುದು ಸ್ವಚ್ಚಮೇಯ ಜಯತೆಯ ಒಂದು ಮುಖ್ಯ ಭಾಗವಾಗಿದೆ : ವಿಶ್ವನಾಥ್.

153
firstsuddi

ಕಳಸ : ಗ್ರಾಮ ಪಂಚಾಯಿತಿ ಮಾಡುವ ಘನ ತ್ಯಾಜ್ಯ ವಿಲೇವಾರಿಯಲ್ಲಿ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸಹಕರಿಸಿದರೆ ಮಾತ್ರ ಇಂತಹ ತ್ಯಾಜ್ಯ ವಿಲೇವಾರಿ ಘಟಕಗಳು ಸಫಲತೆಯನ್ನು ಕಾಣಲು ಸಾದ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್ ತಿಳಿಸಿದರು.
ಕಳಸದಲ್ಲಿ ನಡೆದ ಸ್ವಚ್ಚೋತ್ಸವ ಮತ್ತು ನಿತ್ಯೋತ್ಸವ ಮಾಸಾಚರಣೆ, ಘನ ತ್ಯಾಜ್ಯ ಸಂಪನ್ಮೂಲ ಘಟಕ ಉದ್ಘಾಟನೆ, ಸ್ವಚ್ಚ ಸಂಕೀರ್ಣ ಬ್ರಾಂಡ್ ಲೋಕಾರ್ಪನೆ ಮತ್ತು ವಿಶ್ವ ಕೈತೊಳೆಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರ ಸ್ವಚ್ಚತೆಗೆ ಹೆಚ್ಚಿನ ರೀತಿಯಲ್ಲಿ ಪ್ರಾಮುಖ್ಯತೆಯನ್ನು ನೀಡಿ, ಲಕ್ಷಗಟ್ಟಲೆ ಅನುದಾನವನ್ನು ನೀಡಿ ಘನ ತ್ಯಾಜ್ಯ ಘಟಕಗಳನ್ನು ಮಾಡುತ್ತಿದೆ. ಜಿಲ್ಲೆಯಲ್ಲಿ ಎರಡನೇ ಘಟಕವು ಇದಾಗಿದ್ದು, ಮೂಡಿಗೆರೆ ತಾಲ್ಲೂಕಿನಲ್ಲಿ ಪ್ರಥಮ ಘಟಕವಾಗಿದೆ. ಉದ್ದೇಶ ಒಳ್ಳೆಯದಾಗಿದ್ದರೂ ಕೂಡ ಸಾರ್ವಜನಿಕರ ಸಹಕಾರ ಅತೀ ಮುಖ್ಯ ವಾಗಿದೆ. ಜನಪ್ರತಿ ನಿಧಿಗಳು ಮತ್ತು ಅಧಿಕಾರಿಗಳು ಹೆಚ್ಚಿನ ಮುತುವರ್ಜಿವಹಿಸಿ ಇಂತಹ ಘಟಕಗಳನ್ನು ಅಭಿವೃದ್ಧಿಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಎಸ್‍ಪಿಎಮ್ ಸಹಾಯಕ ಯೋಜನಾಧಿಕಾರಿಯಾದ ವಿಶ್ವನಾಥ್ ಮಾತನಾಡಿ ಘನ ತ್ಯಾಜ್ಯ ನಿರ್ವಹಣೆಯನ್ನು ಸಾಧಿಸುವುದು ಸ್ವಚ್ಚಮೇಯ ಜಯತೆಯ ಒಂದು ಮುಖ್ಯ ಭಾಗವಾಗಿದೆ. ಘನ ತ್ಯಾಜ್ಯದ ನಿರ್ವಹಣೆ ಮನೆಯಿಂದಲೇ ಆರಂಭವಾಗುತ್ತಿದ್ದು ಅಲ್ಲಿ ಕಸವನ್ನು ಹಸಿ ಹಾಗೂ ಒಣ ಕಸವನ್ನಾಗಿ ವಿಂಗಡಿಸಲಾಗುತ್ತದೆ. ಹಸಿ ಕಸವನ್ನು ಗೊಬ್ಬರವಾಗಿಯೂ ಒಣ ಕಸವನ್ನು ಸಂಸ್ಕರಿಸಿ ಮರು ಬಳಕೆ ಮಾಡಲಾಗುತ್ತದೆ. ಈ ಕಾರ್ಯಕ್ರಮ ಕೇವಲ ಬಾಷಣಗಳಲ್ಲಿ ಮುಗಿಯಬಾರದು. ಸಾರ್ವಜನಿಕರು ಕಸವನ್ನು ಮನೆಯಲ್ಲಿಯೇ ವಿಂಗಡಣೆ ಮಾಡಿಕೊಡಬೇಕು. ಘನ ತ್ಯಾಜ್ಯ ವಿಲೇವಾರಿ ಘಟಕಗಳ ಸಮರ್ಪಕವಾದ ಅನುಷ್ಟಾನದಿಂದ ಗ್ರಾಮೀಣ ಪ್ರದೇಶಗಳು ಸ್ವಚ್ಚ ಸುಂದರ ಆರೋಗ್ಯಪೂರ್ಣವಾಗಲು ಸಾಧ್ಯವಾಗಲಿದೆ. ಕಸವಿಲೇವಾರಿ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಳಸ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರಾದ ಹನುಮಂತಪ್ಪ, ಆನಂದ, ಭರತ, ಪ್ರದೀಪ ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆ ಉಪನಿರ್ಧೇಶಕ ಶ್ರೀನಿವಾಸ್ ,ಘನತ್ಯಾಜ್ಯ ವಿಲೇವಾರಿ ಘಟಕ ಯೋಜನೆಯ ರಾಜ್ಯ ಸಂಯೋಜಕ ಮಧುಗೌಡ, ತಾ.ಪಂ ಸದಸ್ಯ ಮಹಮ್ಮದ್ ರಫೀಕ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಧಿಕಾರಿ ವೆಂಕಟೇಶ್, ಜೆಸಿಐ ಅಧ್ಯಕ್ಷ ಕೆ.ಸಿ.ಮಹೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರತೀರವೀಂದ್, ಅಭಿವೃದ್ಧಿ ಅಧಿಕಾರಿ ಕವೀಶ್, ಲೆಕ್ಕ ಪರಿಶೋಧಕ ಸಂತೋಷ್ ಇತರರು ಇದ್ದರು.