ಕಳಸ : ಜಾನಪದಕ್ಕಿದೆ ಸಂಬಂಧ ಬೆಸೆಯುವ ಶಕ್ತಿ : ಬಿ. ಬಿ. ನಿಂಗಯ್ಯ.

316
firstsuddi

ಕಳಸ :ಜಾನಪದಕ್ಕೆ ಮಾನವೀಯ ಸಂಬಂಧಗಳನ್ನು ಬೆಸೆಯುವಂತ ಶಕ್ತಿ ಇದೆ ಎಂದು ಮಾಜಿ ಶಾಸಕರಾದ ಬಿ. ಬಿ. ನಿಂಗಯ್ಯ ಹೇಳಿದರು. ಅವರು ಇಂದು ಕರ್ನಾಟಕ ಜಾನಪದ ಪರಿಷತ್ತು ಕಳಸ ಘಟಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕೆ ತರಬೇತಿ ಸಂಸ್ಥೆ ಸಂಸೆ ಇವರ ಸಹಭಾಗಿತ್ವದಲ್ಲಿ ನೆಡೆದ ಹೋಬಳಿ ಮಟ್ಟದ ಜಾನಪದ ಕಲೆಗಳೆ ತರಬೇತಿ ಕಾರ್ಯಾಗಾರ ಹಾಗೂ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಳ್ಳಿಗಳಲ್ಲಿ ಕೃಷಿಯ ಜೊತೆಗೆ ರೂಢಿಯಲ್ಲಿರುವ ಕಲೆಗಳೆ ಜಾನಪದ ಸಂಸ್ಕೃತಿಯ ಜೀವಾಳ ಗಾಮೀಣ ಬದುಕಿನಲ್ಲಿ ಮನೆ ನೆಡೆಸುವ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಶೇಕಡ 50%ಮೀಸಲಾತಿ ಸಿಗಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಾನಪದ ಜಿಲ್ಲಾಧ್ಯಕ್ಷರಾದ ಜಿ. ಬಿ. ಸುರೇಶ್ ಜಾನಪದ ಕಲ್ಮಶ ಇಲ್ಲದ ಸಂಸ್ಕೃತಿ ಏತಕೆ. ಧಾರ್ಮಿಕ ಸಹಿಷ್ಣ್ಣುತೆ ಪ್ರತಿಪಾದಿಸುತ್ತಿದ್ದ 450 ಕ್ಕೂ ಹೆಚ್ಚು ಜಾನಪದ ಕಲೆಗಳು ಇಂದು ವಿನಾಶದ ಅಂಚಿನಲ್ಲಿ ಇವೆ. ಆಧುನಿಕತೆಯ ಜಾನಪದ ಸಂಸ್ಕೃತಿಯನ್ನು ನುಂಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಮೂಡಿಗೆರೆ ತಾಲ್ಲೂಕು ಗೌರವ ಅಧ್ಯಕ್ಷರಾದ ಡಾ. ಮೋಹನ್ ರಾಜಣ್ಣ ಮಾತನಾಡಿ ಜಾನಪದ ಕಲೆ ನಮ್ಮ ಪಾರಂಪರಿಕ ಜ್ಞಾನದಿಂದ ಹೊರಹಮ್ಮಿದ್ದು ಒಬ್ಬರಿಂದ ಇನ್ನೊಬರಿಗೆ ಪಸರಿಸುತ್ತಾ ಬೆಳೆದು ಬಂದಿರುವಂತದ್ದು ಆದರೇ ಅದಕ್ಕೀಗ ಸಾಂಪ್ರದಾಯಿಕ ಶಿಕ್ಷಣದ ಸ್ಪರ್ಶ ಸಿಕ್ಕಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಬಳಸಿಕೊಂಡು ಆ ಕ್ಷೆತ್ರದಲ್ಲಿ ಮುಂದುವರಿಯಲು ಬೇಕಾದಷ್ಟು ಅವಕಾಶಗಳಿವೆ ಎಂದರು. ಐ ಟಿ ಐ ಸಂಸ್ಥೆ ಯ ಪ್ರಾಚಾರ್ಯ ಸತೀಶ್ ಕುಮಾರ್, ಜ್ವಾಲನಯ್ಯ, ಕೆ. ಜೆ ಧರಣೇಂದ್ರ, ಸುಬ್ರಮಣ್ಯ, ಚಂದ್ರಶೆಟ್ಟಿ, ಹರಿಣಾಕ್ಷಿ, ಸುರಭಿ ಜೈನ್, ನಾಗಪ್ಪಗೌಡ, ಹಾಗೂ ಬಿ ಎಂ. ಸುರೆಂದ್ರ, ದೇವರಾಜ್, ಶಿವರಾಮ್ ಪಂಡಿತ್, ಗಂಗಮ್ಮ, ಅಶ್ವಿನಿ ಇದ್ದರು.  ಕಳಸ ಕ ಜಾ ಪ ಅಧ್ಯಕ್ಷ. ಆರ್ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎನ್. ಎಸ್. ರವೀಂದ್ರ ಸ್ವಾಗತಿಸಿ ಎನ್ ಜಿ. ಸುದೀಶ್ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಕು||ಸುರಭಿ ಜೈನ್ ನೆರವೇರಿಸಿದರು.