ಕಳಸ ತಾಲ್ಲೂಕಿನ ಮರಸಣಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ವಿಶ್ವನಾಥ್ ,ಉಪಾಧ್ಯಕ್ಷರಾಗಿ ವಿಶಾಲಕ್ಷಿ ಆಯ್ಕೆಯಾದರು.
ಮರಸಣಿಗೆ ಗ್ರಾ.ಪಂಯು 9 ಸದಸ್ಯರುಗಳನ್ನು ಒಳಗೊಂಡಿದ್ದು,ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತರು 5 ಸ್ಥಾನ ಪಡೆದಿದ್ದು, ಜೆಡಿಎಸ್ ಮತ್ತು ಬಿಜೆಪಿ ತಲಾ 2 ಸ್ಥಾನಗಳಿಗೆ ತೃಪ್ತಿ ಪಡೆದುಕೊಂಡಿದ್ದರು.
ಬಹುಮತ ಪಡೆದಿದ್ದ ಕಾಂಗ್ರೇಸ್ ಸೋಮವಾರ ಅಧ್ಯಕ್ಷರನ್ನಾಗಿ ವಿಶ್ವನಾಥ್ ಅವರನ್ನು,ಉಪಾಧ್ಯಕ್ಷರನ್ನಾಗಿ ವಿಶಾಲಕ್ಷಿ ಅವರನ್ನು ಆವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿ ನಂತರ ಮತನಾಡಿದ ವಿಶ್ವನಾಥ್, ಮರಸಣಿಗೆ ಗ್ರಾಮ ಪಂಚಾಯಿತಿಯಲ್ಲಿ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದೇನೆ.ಎರಡನೇ ಬಾರಿಗೆ ಅಧ್ಯಕ್ಷನಾಗಿದ್ದೇನೆ.ಇಷ್ಟರವರೆಗೆ ಚುನಾವಣೆ ಪಕ್ಷ.ಇನ್ನು ಊರಿನ ಅಭಿವೃದ್ಧಿ ನನ್ನ ದ್ಯೇಯವಾಗಿದೆ.ಗ್ರಾಮ ಪಂಚಾಯಿತಿಯ ಇತಿ ಮಿತಿಗಳಲ್ಲಿ ನನ್ನ ಶಕ್ತಿ ಮೀರಿ ಕೆಲಸ ಮಾಡಲು ಮತ್ತು ಜನರ ಸೇವೆ ಮಾಡಲು ನಾನು ಸದಾ ಭದ್ದನಾಗಿದ್ದೇನೆ ಎಂದು ಹೇಳಿದರು.
ನೂತನ ಸದಸ್ಯರಾದ ಮೋಹನ್,ಗುಲಾಬಿ,ಹೇಮಾವತಿ,ಕಾಂಗ್ರೇಸ್ ಮುಖಂಡರಾದ ಕೆ.ಆರ್.ಪ್ರಭಾಕರ್,ಶ್ರೇಣಿಕ್,ಎನ್.ಎಂ.ಹರ್ಷ,ಅಬ್ದುಲ್ ಶುಕುರು,ಮರಸಣಿಗೆ ಘಟಕ ಅಧ್ಯಕ್ಷ ಉಮೇಶ್,ವೀರೇಂದ್ರ,ಕೆ.ಸಿ.ಮಹೇಶ್,ಮಮ್ತಾಜ್ ಬೇಗಂ,ಅನಿಲ್ ಬಂಡಾರಿ,ಸಿಪಿಐ ಮುಖಂಡರಾದ ಲಕ್ಷಣಾಚಾರ್,ರವಿ ಸುಂಕಸಾಲೆ ಇತರರು ಇದ್ದರು.










