ಕಳಸ : ಹೊರನಾಡು ಅನ್ನಪೂರ್ಣೇಶ್ವರಿಗೆ ಮೃಗಾರೂಢಾ ಕೂಷ್ಮಾಂಡ ಅಲಂಕಾರ ಪೂಜೆ…

143
firstsuddi

ಕಳಸ : ಶ್ರೀ ಕ್ಷೇತ್ರ ಹೊರನಾಡಿನ ಜಗನ್ಮಾತೆ ಅನ್ನಪೂರ್ಣೇಶ್ವರಿಯ ಸನ್ನಿದಿಯಲ್ಲಿ ಶ್ರೀ ಅನ್ನಪೂರ್ಣೇಶ್ವರಿಗೆ ಜಗಜ್ಜನನೀ ದುರ್ಗಾದೇವಿಯ ನಾಲ್ಕನೇ ಸ್ವರೂಪ ಮೃಗಾರೂಢಾ ಕೂಷ್ಮಾಂಡ ಅಲಂಕಾರ ಪೂಜೆಯನ್ನು ಮಾಡಲಾಯಿತು.
ಅನ್ನಪೂರ್ಣೇಶ್ವರಿಯ ಸನ್ನಿದಾನದಲ್ಲಿ ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಶ್ರೀ ಸೂಕ್ತ ಹೋಮ ನೆರವೇರಿತು.
ತನ್ನ ಮಂದ, ಮದುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಮತ್ತು ಇವಳ ವಾಹನಸಿಂಹವಾಗಿರುವ ಕಾರಣ ಇವಳನ್ನು ಮೃಗಾರೂಢಾ ಕೂಷ್ಮಾಂಡಾದೇವೀ ಎಂದು ಕರೆಯುತ್ತಾರೆ. ಇವಳಿಗೆ ಎಂಟು ಬುಜಗಳಿದ್ದು ಅಷ್ಟಭುಜಾದೇವಿ ಎಂದು ಖ್ಯಾತಳಾಗಿದ್ದಾಳೆ. ಇವಳ ಏಳು ಕೈಗಳಲ್ಲಿ ಕ್ರಮಶಃ ಕಮಂಡಲು, ಧನುಷ, ಭಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆ ಇವೆ. ಇವಳನ್ನು ಭಕ್ತಿ ನಿಷ್ಟೆ ಶ್ರದ್ದೆಯಿದ ಆರಾದಿಸಿದರೆ ಆಯುಸ್ಸು, ಯಶ, ಬಲ, ಆರೋಗ್ಯದ ವೃದ್ದಿಯಾಗುತ್ತದೆ.