ಮೂಡಿಗೆರೆ : ತಾರತಮ್ಯ ಮಾಡದೆ ಎಲ್ಲಾ ಸಹಕಾರ ಸಂಘಗಳಿಗೆ ಹೆಚ್ಚುವರಿ ಸಾಲ ನೀಡಲು ತೀರ್ಮಾನ : ಡಿ.ಎಸ್ ಸುರೇಶ್.

385
firstsuddi

ಕೊಟ್ಟಿಗೆಹಾರ : ತಾರತಮ್ಯ ಮಾಡದೇ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಿಗೆ ಹೆಚ್ಚುವರಿ ಸಾಲ ಹಾಗೂ ಹೊಸ ಸಾಲ ನೀಡಲು ತೀರ್ಮಾನ ಕೈಗೊಳ್ಳಲಾಗಿದ್ದು ಸಹಕಾರ ಸಂಘಗಳು ಭಯಮುಕ್ತ ವಾತಾವರಣದಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಧ್ಯಕ್ಷ ಹಾಗೂ ತರೀಕೆರೆ ಶಾಸಕ ಡಿ.ಎಸ್ ಸುರೇಶ್ ಹೇಳಿದರು.
ಮೂಡಿಗೆರೆ ತಾಲ್ಲೂಕಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳು, ಪಿಸಿಎಆರ್‍ಡಿ ಬ್ಯಾಂಕ್, ಟಿಎಪಿಸಿಎಂಎಸ್ ಮತ್ತು ಇತರೆ ಸಹಕಾರ ಸಂಘಗಳ ವತಿಯಿಂದ ನೂತನವಾಗಿ ಆಯ್ಕೆಯಾಧ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಧ್ಯಕರು, ಉಪಾಧ್ಯಕ್ಷರು, ನಿರ್ದೇಶಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಿಗೆ ಬೇಟಿ ನೀಡಿ ಅಲ್ಲಿನ ಆಡಳಿತ ಮಂಡಳಿಯೊಡನೆ ಮಾತನಾಡಿ ಸಮಸ್ಯೆಗಳನ್ನು ಆಲಿಸಲಾಗುವುದು. ರೈತರ ಸಮಗ್ರ ಅಭಿವೃದ್ದಿಗೆ ಸಂಘಟಿತರಾಗಿ ಕಾರ್ಯ ನಿರ್ವಹಿಸೋಣ. ಸಹಕಾರ ಸಂಘದ ಸವಲತ್ತುಗಳ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷರಾದ ಟಿ.ಎಲ್ ರಮೇಶ್ ಮಾತನಾಡಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಎಲ್ಲರ ಸಹಕಾರ ಅಗತ್ಯ. ಸಹಕಾರ ಸಂಘವನ್ನು ಮತ್ತಷ್ಟು ರೈತಸ್ನೇಹಿ ಹಾಗೂ ಜನಸ್ನೇಹಿಯಾಗಿಸಲು ಒಟ್ಟಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದರು.
ಸಿಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಹಳಸೆ ಶಿವಣ್ಣ ಮಾತನಾಡಿ ಚಿಕ್ಕಮಗಳೂರು ಜಿಲ್ಲೆ ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆಯನ್ನು ಒಳಗೊಂಡಿದೆ. ಅತಿವೃಷ್ಟಿಯಿಂದ ಜಿಲ್ಲೆಯ ಮಲೆನಾಡು ಭಾಗದ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ಹಿಂದೆ ಒಂದೆರಡು ಕಾಡಾನೆಗಳು ಅಲ್ಪ ಪ್ರಮಾಣದಲ್ಲಿ ಬೆಳೆ ಹಾನಿ ಮಾಡುತ್ತಿದ್ದವು. ಈಗ ಕಾಡಾನೆಯ ಹಿಂಡು ಮನೆಯ ಸಮೀಪ ಬಂದು ಬೀಡು ಬಿಟ್ಟಿವೆ. ಅಪಾರ ಪ್ರಮಾಣದ ಬೆಳೆಹಾನಿ ಮಾಡುತ್ತಿದ್ದೆ. ಸಹಕಾರ ಸಂಘದ ಜಿಲ್ಲಾ ಅಧ್ಯಕ್ಷರೊಡನೆ ಮಲೆನಾಡು ಭಾಗದ ಅತಿವೃಷ್ಟಿ ಪ್ರದೇಶಗಳಿಗೆ ಬೇಟಿ ನೀಡಲಾಗುವುದು ಎಂದರು.
ಬಣಕಲ್ ಪ್ರಾಥಮಿಕ ಕೃಷಿಪತ್ತಿನ ಸಹಕಾಋ ಸಂಘದ ಅಧ್ಯಕ್ಷ ಬಿ.ಎಂ ಭರತ್ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‍ನ ನಿವೃತ್ತ ಅಧಿಕಾರಿ ಬಸವರಾಜಪ್ಪ, ತಾ.ಪಂ ಅಧ್ಯಕ್ಷ ಕೆ.ಸಿ ರತನ್, ಉಪಾಧ್ಯಕ್ಷೆ ಪ್ರಮೀಳಾ ಮಂಜಯ್ಯ, ಸದಸ್ಯೆ ಭಾರತಿರವೀಂದ್ರ, ವೀಣಾಉಮೇಶ್, ಜಿ.ಪಂ ಸದಸ್ಯ ಶಾಮಣ್ಣ ಬಣಕಲ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್ ರಘು, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬಣಕಲ್ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ನಿಶಾಂತ್, ಸಹಕಾರ ಸಂಘದ ಪಧಾಧಿಕಾರಿಗಳಾದ ಗಜೇಂದ್ರ, ರಂಗನಾಥ್, ಕಲ್ಲೇಶ್, ವಿಕ್ರಂ, ಮನೋಜ್, ಪಂಚಾಕ್ಷರಿ, ಸತೀಶ್, ಅರುಣ್,ಸಂತೋಷ್, ಗಜೇಂದ್ರ, ಜಯರಾಮಗೌಡ, ಮಂಜಪ್ಪಯ್ಯ, ಶಿವರಾಜ್, ಜಯಪಾಲ್, ರವಿ, ಅಶ್ವತ್, ಶಾಂತಲಾ ನಾಗೇಶ್, ಮುಂತಾದವರು ಇದ್ದರು.