ನವದೆಹಲಿ : ಪ್ರತಿಯೊಬ್ಬರೂ ಲಸಿಕೆ ಬರುವವರೆಗೂ ಕೊರೊನಾ ವಿರುದ್ಧ ಹೋರಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾದಿಂದ ಮರಣಪ್ರಮಾಣ ಕಡಿಮೆಯಿದೆ. ಲಾಕ್ಡೌನ್ ಅಂತ್ಯವಾಗಿದ್ದರೂ, ಕೊರೊನಾ ನಾಶವಾಗಿಲ್ಲ. ಕೊರೊನಾ ವಿರುದ್ಧ ಹೋರಾಟದಲ್ಲಿ ಜನರು ಕಷ್ಟಪಟ್ಟಿದ್ದಾರೆ. ನಮ್ಮ ಪ್ರಯತ್ನದಿಂದ ನಮ್ಮ ದೇಶ ಸ್ಥಿರವಾಗಿದೆ. ಕಳೆದ 7-8 ತಿಂಗಳುಗಳಿಂದ ನಾವು ಸಂಕಷ್ಟದಲ್ಲಿದ್ದೇವೆ. ಕೊರೊನಾದಿಂದ ದೇಶ ಹಾಳಾಗಲು ಬಿಡಬಾರದು. ಇನ್ನೂ ದೇಶದಲ್ಲಿ ಕೊರೊನಾ ಲಸಿಕೆ ಬಂದಿಲ್ಲ. ಕೊರೊನಾ ಲಸಿಕೆ ಬರುವವರೆಗೆ ನಾವು ಹೋರಾಡಬೇಕು. ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಹಬ್ಬಗಳ ಸಮಯದಲ್ಲಿ ಎಲ್ಲರೂ ಎಚ್ಚೇತ್ತುಕೊಂಡು ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಮಾಸ್ಕ್ ಹಾಕಿಕೊಳ್ಳದೇ ಯಾವುದೇ ಕಾರಣಕ್ಕೂ ಹೊರ ಬರಬೇಡಿ. ಪ್ರತಿಯೊಬ್ಬರಿಗೂ ಲಸಿಕೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.










