ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ
ಹೊಸಪೇಟೆ : ಜನಸಾಮಾನ್ಯರಿಗೆ ಎಟಕುವ ಧರದಲ್ಲಿ ವಸ್ತುಗಳನ್ನು ಮಾರಾಟ ಮಾಡಿ, ಅಲ್ಲದೇ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದರ ಜೊತೆಗೆ ಪ್ರೀತಿ ವಿಶ್ವಾಸದಿಂದ ವ್ಯವಹರಿಸಿ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‍ರವರು ಸಲಹೆ ಮಾಡಿದರು.
ಅವರು ನಗರದ ಕಾಲೇಜ್ ರಸ್ತೆಯಲ್ಲಿರುವ ಖಾಸಗಿ ಜವಳಿ ಅಂಗಡಿಯನ್ನು ಉದ್ಘಾಟಿಸಿ ಮಾತನಾಡಿದರು.
ಇಲ್ಲಿಗೆ ಬರುವ ಗ್ರಾಹಕರಿಗೆ ಪ್ರೀತಿ ಮತ್ತು ಗೌರವದಿಂದ ಮಾತನಾಡಿಸಿ ಹಾಗೂ ಅವರಿಗೆ ಯಾವುದೇ ರೀತಿಯಲ್ಲಿ ವಂಚನೆಗಳಿಗೆ ಆಸ್ಪದ ಕೊಡದೇ ಉತ್ತಮ ರೀತಿಯಲ್ಲಿ ನೋಡಿಕೊಳ್ಳಿ ಎಂದು ಜವಳಿ ಅಂಗಡಿ ಸೋಚ್‍ನ ಕಾರ್ಯಕಾರಿ ನಿರ್ದೇಶಕ ಮತ್ತು ಸಿಇಒ ವಿನಯ್ ಚಟ್ಲಾನಿಯವರಿಗೆ ಕಿವಿ ಮಾತು ಹೇಳಿದರು.
ನಂತರ ಸೋಚ್‍ನ ನಿರ್ದೇಶಕ ವಿನಯ್ ಚಟ್ಲಾನಿ ಮಾತನಾಡಿ, ನಮ್ಮದು ಭಾರತದ ಮುಂಚೂಣಿಯಲ್ಲಿರುವ ಎಥ್ನಿಕ್ ವೇರ್ ಬ್ರಾಂಡ್ ಆಗಿದ್ದು, ಮೊದಲ ಬಾರಿಗೆ ಹೊಸಪೇಟೆಯಲ್ಲಿ ನಮ್ಮ ಸೋಚ್‍ನ ಸ್ಟೋರ್ ಆರಂಭಿಸಿದ್ದೇವೆ. ವಿಶೇಷವಾಗಿ ನಮ್ಮ ಸಂಸ್ಥೆಯಿಂದ ಆನ್ಲೈನ್ನಲ್ಲಿ ಶಾಪ್ ಮೂಲಕ ರೀಟೇಲ್ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುತ್ತಿದೆ. ಇದರೊಂದಿಗೆ ಕರ್ನಾಟಕದ್ಯಾಂತ ಒಟ್ಟು 53 ಸ್ಟೋರ್‍ಗಳನ್ನು ಹೊಂದಿದಂತಾಗಿದೆ. ಅಲ್ಲದೇ ಹಬ್ಬದ ಸಂದರ್ಭಗಳಲ್ಲಿ ಗ್ರ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ನಮ್ಮ ಪ್ರೊಡಕ್ಟ್‍ಗಳನ್ನ ನೀಡಲಿದ್ದು, ಹೊಸ ವಿನ್ಯಾಸದ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ನಾವು ಉತ್ಸುಕರಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಧಮೇಂದ್ರ ಸಿಂಗ್, ಬಸವರಾಜ್ ನಲತವಾಡ, ಜೀವರತ್ನಂ, ರಾಘವೇಂದ್ರ ಮತ್ತು ಸಿಬಂಧಿಗಳು ಭಾಗವಹಿಸಿದ್ದರು.










