ಕಳಸ:ವೈವಿದ್ಯತೆಯಲ್ಲಿ ಏಕತೆಯನ್ನು ಕಾಣಬಹುದಾದಂತಹ ರಾಷ್ಟ್ರ ಪ್ರಪಂಚದಲ್ಲಿ ಇರುವುದಾದರೆ ಅದು ಭಾರತ ಮಾತ್ರ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೆಶ್ವರ ಜೋಷಿ ಹೇಳಿದರು.
ಭಾನುವಾರ ಕಳಸದ ಪ್ರಭೋದಿನಿ ವಿದ್ಯಾ ಕೇಂದ್ರದ ರಂಗಮಂಟಪದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಹಮ್ಮಿಕೊಂಡಿರುವ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಿ ಮತನಾಡಿದ ಅವರು ಗ್ರಾಮದಿಂದ ರಾಷ್ಟ್ರಮಟ್ಟದ ವರೆಗೂ ಕಲೆ ಹರಡಿದೆ.ಆ ಎಲ್ಲ ಕಲೆಯ ಮುಖಾಂತರ ಭಾರತ ಎನ್ನುವಂತ ವಿಶಿಷ್ಟವಾದ ನಾಮಾಂಕಿವನ್ನು ಇಟ್ಟುಕೊಂಡಂತಹ ಈ ದೇಶದ ಪ್ರಾದಿನಿತ್ಯವನ್ನು ಪ್ರತಿನಿಧಿಸುತ್ತದೆ ಅನ್ನುವಂತದನ್ನು ತೋರಿಸುತ್ತದೆ. ಇಲ್ಲಿ ಬಹಳ ಆಳವಾಗಿ ಬೇರೂರಿರುವಂತಹ ಸಂಸ್ಕøತಿ ಮತ್ತು ಆದ್ಯಾತ್ಮಿಕ ಸಂಸ್ಕøತ ದಿಂದ ಈ ದೇಶವನ್ನು ನಾಶ ಪಡಿಸಬೇಕು ಎಂದು ದಂಡೆತ್ತಿ ಬಂದವರಿಂದ ಸಾಧ್ಯವಾಗಲಿಲ್ಲ.
ಸುಗ್ಗಿಯ ಸಂಕ್ರಾಂತಿಯ ಸಂದರ್ಭದಲ್ಲಿ ನಾವು ಬೆಳೆದಿರುವಂತ ಎಲ್ಲಾ ಪದಾರ್ಥಗಳನ್ನು ಶೇಖರಿಸಿಟ್ಟು ಹುಗ್ಗಿಯೆನ್ನುವ ಪಾಯಸವನ್ನು ಉಣ ಮಾಡುವ ಸಂದರ್ಭ ಒಂದು ಕಡೆಯಾದರೆ, ಸುಗ್ಗಿ ಹಬ್ಬದಲ್ಲಿ ವೈವಿದ್ಯಮಯವಾದ ಕಲೆಗಳ ಮುಖಾಂತರ ಕೃತಜ್ಞತೆಯನ್ನು ಸಲ್ಲಿಸುವಂತ ವ್ಯವಸ್ಥೆಯೇ ಸುಗ್ಗಿ ಹಬ್ಬದ ಹಿರಿಮೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ,ಭತ್ತ ಕೊಯ್ದು ಫಸಲು ಬರುವಾಗ ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ.ಅದು ಆಯಾಯ ಪ್ರದೇಶಗಳಿಗೆ ಆಯಾಯ ರೀತಿಯಲ್ಲಿ ಸೀಮಿತವಾಗಿರುತ್ತದೆ.ಕಲಾವಿದರಿಗೆ ತಮ್ಮ ಕಲೆಯನ್ನು ಇನ್ನೊಬ್ಬರಿಗೆ ತೋರಿಸದಿದ್ದರೆ ಏನೋ ಕಳೆದುಕೊಂಡಂತೆ ಕೊರೋನದಿಂದ ಒಂದು ವರ್ಷಗಳ ಕಾಲ ಕಾರ್ಯಕ್ರಮಗಳು ಕಡಿಮೆಯಾಗಿತ್ತು.ಇವತ್ತು ಅದನ್ನು ನೀಗಿಸಲು ಸಂಸ್ಕøತಿ ಇಲಾಖೆ ಈ ಕಾರ್ಯಕ್ರಮವನ್ನು ಕಳಸದಲ್ಲಿ ಹಮ್ಮಿಕೊಂಡಿದೆ ಎಂದು ಹೇಳಿದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಸುಗ್ಗಿ-ಹುಗ್ಗಿ ಕಾರ್ಯಕ್ರಮದಲ್ಲಿ ಅಜ್ಜಂಪುರ ತಿಮ್ಮಪ್ಪ ತಂಡದಿಂದ ಪುರುಷ ವೀರಗಾಸೆ,ಉಷಾ ಚಿಕ್ಕಮಗಳೂರು ತಂಡದಿಂದ ಜಾನಪದ ನೃತ್ಯ,ಸವಿತ ಚಿಕುನ್ನಯ್ಯ ಮಳವಳ್ಳಿ ತಂಡದಿಂದ ಪೂಜಾ ಕುಣಿತ,ರಂಜಿತ್ ಮೂಡಿಗೆರೆ ತಂಡದಿಂದ ಕಂಸಾಳೆ,ಸಹನ ತಂಡ ಮಂಡ್ಯ ಇವರಿಂದ ಲಂಬಾಣಿ ನೃತ್ಯ,ಹೂವೇಗೌಡ ತಂಡ ಹೊರನಾಡು ಇವರಿಂದ ಅಂಟಿಕೆ-ಪಿಂಟಿಕೆ,ಅಶೋಕ್ ಜೈನ್ ತಂಡದಿಂದ ಮಲೆನಾಡ ನೃತ್ಯ,ಚಂದ್ರಮೌಳಿ ಹಡಗಲು ತಂಡದಿಂದ ಡೊಳ್ಳುಕುಣಿತ,ಜ್ಯೋತಿ ಹಳುವಳ್ಳಿ ತಂಡದಿಂದ ಯಕ್ಷಗಾನ,ಲಾಸ್ಯ ಮೈಸೂರು ತಂಡದಿಂದ ಜಾನಪದ ಗೀತೆಗಳು,ಎಂ.ಕರಿಯಪ್ಪ ಅಂತರಗಟ್ಟೆ ತಂಡದಿಂದ ಚಿಟ್ಟಿಮೇಳ,ಮೌನಶ್ರೀ ಮದ್ದೂರು ತಂಡದಿಂದ ಪಟಕುಣಿತ,ಶಿವಕುಮಾರ ಶ್ರೀರಂಗಪಟ್ಟಣ ತಂಡದಿಂದ ನಂಧೀದ್ವಜ,ಸುಮಂತ್ ಮೈಸೂರು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್,ಹೊರನಾಡಿನ ರಾಜಲಕ್ಷ್ಮೀ ಜೋಷಿ,ಪ್ರಭೋದಿನಿ ಶಾಲೆ ಶಾಲಾ ಮಂಡಳಿಯ ಸದಸ್ಯ ಬಾಲಕೃಷ್ಣ ಪ್ರಭು,ಮುಖ್ಯ ಶಿಕ್ಷಕ ಆನಂದ ಇತರರು ಇದ್ದರು.










