ಬೆಂಗಳೂರು: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್‌ನಿಂದ ನಿನ್ನೆ 5ನೇ ಪಟ್ಟಿ ರಿಲೀಸ್ ಮಾಡಲಾಗಿತ್ತು. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾದ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಕಾಂಗ್ರೆಸ್ ಪಕ್ಷವು ತನ್ನ ಆರನೇ ಹಾಗೂ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅಂತಿಮ ಪಟ್ಟಿಯಲ್ಲಿ ಯಾರಿಗೆಲ್ಲಾ ಟಿಕೆಟ್?
• ರಾಯಚೂರು – ಮೊಹಮ್ಮದ್ ಶಾಲಮ್
• ಶಿಡ್ಲಘಟ್ಟ – ಬಿ.ವಿ ರಾಜೀವ್ ಗೌಡ
• ಸಿ ವಿ ರಾಮನ್ ನಗರ – ಎಸ್. ಆನಂದ್ ಕುಮಾರ್
• ಅರಕಲಗೂಡು – ಎಚ್.ಪಿ. ಶ್ರೀಧರ್ ಗೌಡ
• ಮಂಗಳೂರು ಉತ್ತರ – ಇನಾಯತ್ ಅಲಿ.










