ಕಾಂಗ್ರೆಸ್ ಪಕ್ಷಕ್ಕೆ ಸುನಿಲ್ ಜಾಖರ್ ರಾಜೀನಾಮೆ…

48
firstsuddi

ನವದೆಹಲಿ : ಕಾಂಗ್ರೆಸ್ ಮೂರು ದಿನಗಳ ಚಿಂತನಾ ಶಿಬಿರ ನಡೆಸುತ್ತಿದೆ. ಇನ್ನೊಂದೆಡೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಸುನಿಲ್ ಜಾಖರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಇಂದು ಫೇಸ್ ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ಪಕ್ಷದ ಹೆಸರು ತೆಗೆದು ಹಾಕಿದ್ಧಾರೆ. ಜೊತೆಗೆ ‘ದಿಲ್ ಕಿ ಬಾತ್’ ಶೀರ್ಷಿಕೆಯಡಿ ಫೇಸ್ ಬುಕ್ ಲೈವ್ ನಲ್ಲಿ ಬಂದು ‘ಗುಡ್ ಬೈ ಮತ್ತು ಗುಡ್ ಲಕ್ ಕಾಂಗ್ರೆಸ್’ ಎಂದು ಪಕ್ಷಕ್ಕೆ ವಿದಾಯ ಘೋಷಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಸುನಿಲ್ ಜಾಖರ್ ವಿರುದ್ಧ ಕಾಂಗ್ರೆಸ್ ಶಿಸ್ತು ಸಮಿತಿಯು ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಪಕ್ಷದ ಎಲ್ಲ ಹುದ್ದೆಗಳಿಂದ ತೆಗೆದು ಹಾಕಿತ್ತು. ಇದರಿಂದ ನಾನು ಎದೆಗುಂದಿದ್ದೇನೆ ಎಂದು ಜಾಖರ್ ಹೇಳಿಕೊಂಡಿದ್ದಾರೆ.