ಚಿಕ್ಕಬಳ್ಳಾಪುರ : ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ನಿನ್ನೆ ರಾತ್ರಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಏಕಾ ಏಕಿ ಭೂಮಿಯಿಂದ ಭಾರೀ ಪ್ರಮಾಣದ ಶಬ್ದ ಕೇಳಿ ಬಂದಿದ್ದು, ಭಾರೀ ಶಬ್ದಕ್ಕೆ ಅಲ್ಲಿನ ಜನರೆಲ್ಲ ಬೆಚ್ಚಿಬಿದ್ದಿದ್ದಾರೆ.
ನಿನ್ನೆ ರಾತ್ರಿ 9:30 ಹಾಗೂ 9:45 ಗಂಟೆ ಸುಮಾರಿಗೆ ಎರಡು ಬಾರಿ ಭಾರೀ ಪ್ರಮಾಣದಲ್ಲಿ ಶಬ್ಧ ಕೇಳಿಬಂದಿದೆ. ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದ್ದು, ರಾತ್ರಿ ಇಡೀ ಆತಂಕದಿಂದಲೇ ಕಾಲ ಕಳೆದಿದ್ದಾರೆ.
ಬಾಗೇಪಲ್ಲಿ ತಾಲ್ಲೂಕಿನ ಪೆದ್ದ ತುಮಕೇಪಲ್ಲಿ, ಲಘು ಮದ್ದೇಪಲ್ಲಿ, ಗುರ್ರಾಲದಿನ್ನೆ, ಶಂಖವಾರಂಪಲ್ಲಿ, ಯಲ್ಲಂಪಲ್ಲಿ, ಮದ್ದಲಖಾನೆ, ಈರಗಂಟಪಲ್ಲಿ ಹಾಗೂ ಟೆಂಕಮಾಕಲಪಲ್ಲಿ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಭೂಮಿಯ ಒಳಗಿಂದ ಭಾರೀ ಪ್ರಮಾಣದ ಶಬ್ದ ಕೇಳಿಸಿಕೊಂಡಿದ್ದಾಗಿ ಜನರು ಹೇಳಿದ್ದಾರೆ.










