ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿಗೆ ಸೇರಿದಕ್ಕೆ ಅವರ ಮಗಳು ಫೇಲ್ ಆಗಿದ್ದಾಳೆ : ಸಿದ್ದರಾಮಯ್ಯ…

201
firstsuddi

ಕಲಬುರಗಿ : ನನ್ನ ಮಗಳು ಫೇಲ್ ಆಗುವುದಕ್ಕೆ ಕಾಂಗ್ರೆಸ್ ಕಾರಣ ಎಂಬ ಉಮೇಶ್ ಜಾಧವ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಧವ್ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿಗೆ ಸೇರಿದಕ್ಕೆ ಅವರ ಮಗಳು ನೊಂದು ಫೇಲ್ ಆಗಿದ್ದಾಳೆ. ಅನುಕಂಪ ಉಂಟಾಗಲಿ ಎಂದು ಜಾಧವ್ ಅವರು ಈ ರೀತಿ ಹೇಳಿದ್ದಾರೆ. ಸಾಲಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು ನಾನೇನು ನಮ್ಮ ಅಪ್ಪನ ಹಣದಿಂದ ಸಾಲಮನ್ನಾ ಮಾಡಿರಲಿಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದ ಹಾಗೇ ಜನರ ಹಣವನ್ನು ಅವರಿಗೆ ನೀಡಿದ್ದೇನೆ ಎಂದು ಹೇಳಿದರು.