ಬೆಂಗಳೂರು : ಮತಾಂತರ ನಿಷೇಧ ಮಸೂದೆ ಮಂಡನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರೋಧ ಪಕ್ಷ. ಹಾಗಾಗಿ, ಎಲ್ಲದಕ್ಕೂ ವಿರೋಧ ಮಾಡ್ತಾರೆ ಎಂದು ಹೇಳಿದರು.
ಆರ್.ಟಿ. ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಸಿಎಂ, ಮೂರು ವರ್ಷದ ನಂತರ ಈ ಬಾರಿ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ಈಗಾಗಲೇ ನಿರ್ಧರಿಸಿದೆ. ಡಿ.13 ರಿಂದ ಡಿ.24ರವರೆಗೆ ಬೆಳಗಾವಿ ಅಧಿವೇಶನ ನಡೆಸಲು ಸರ್ಕಾರ ಎಲ್ಲ ರೀತಿಯಲ್ಲಿ ಸಜ್ಜಾಗಿದೆ ಎಂದು ತಿಳಿಸಿದರು.
ಏರ್ ರ್ಪೋರ್ಟ್ ನಲ್ಲಿ ಕೋವಿಡ್ ಪರೀಕ್ಷೆಗೆ ದುಬಾರಿ ಹಣ ಪಡೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಬೇರೆಡೆ ಹೋಲಿಕೆ ಮಾಡಿದರೆ ನಮ್ಮಲ್ಲೇ ದರ ಕಡಿಮೆ. ತಮಿಳುನಾಡಿನಲ್ಲಿ ನಮಗಿಂತಲೂ ಹೆಚ್ಚು ದರ ಇದೆ. ತಂತ್ರಜ್ಞಾನ ಆಧಾರಿತ ಪರೀಕ್ಷೆ ಮಾಡುವುದರಿಂದ ದರ ಸ್ವಲ್ಪ ಹೆಚ್ಚು ಎಂದು ಸ್ಪಷ್ಟನೆ ನೀಡಿದರು.










