ಕಾಂಗ್ರೆಸ್ಸಿನವರು ತಲೆತಿರುಕರಂತೆ ಮಾತನಾಡುತ್ತಾರೆ : ಬಿ.ಎಸ್. ಯಡಿಯೂರಪ್ಪ…

204
firstsuddi

ನವದೆಹಲಿ : ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು “ಕಾಂಗ್ರೆಸ್ಸಿನವರು ತಲೆತಿರುಕರು” ಹೀಗಾಗಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಇಂತಹ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಪರಿಹಾರ ಬಿಡುಗಡೆ ಬಗ್ಗೆ ಕೇಂದ್ರದಿಂದ ಭರವಸೆ ನೀಡಿದ್ದು, ಪರಿಹಾರ ಹಣ ಬಿಡುಗಡೆ ಆಗುತ್ತದೆ. ಪರಿಹಾರ ಬಿಡುಗಡೆ ಮಾಡುವ ವಿಚಾರದಲ್ಲಿ ಕೇಂದ್ರ ತಾರತಮ್ಯ ಮಾಡುವುದಿಲ್ಲ. ಹಾಗೆಯೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇಂದು ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತನಾಡುತ್ತೇನೆ. ಭಾನುವಾರ ಅಥವಾ ಸೋಮವಾರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.