ಕಾಂತಾರ ‘ವರಾಹ ರೂಪಂ’ ಹಾಡಿಗೆ ಕಾನೂನು ಸಂಕಷ್ಟ – ಕೇರಳ ಕೋರ್ಟ್‍ನಿಂದ ತಡೆಯಾಜ್ಞೆ…

66
firstsuddi

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾದ ಹಾಡೊಂದಕ್ಕೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವ ‘ವರಾಹ ರೂಪಂ’ ಹಾಡಿಗೆ ಕೇರಳದ ಕೊಯಿಕ್ಕೋಡು ಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದ ತಂಡಕ್ಕೆ ಹಿನ್ನಡೆ ಆಗಿದೆ.

ಕೇರಳದ ತೈಕುಡಂ ಬಿಡ್ಜ್ ಬ್ಯಾಂಡ್, ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ತಮ್ಮ ಬ್ಯಾಂಡ್ ನ ಹಾಡಿನಿಂದ ಕದಿಯಲಾಗಿದೆ ಎಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿತ್ತು. ಕಾನೂನು ರೀತಿಯಲ್ಲಿ ಹೋರಾಟ ಮಾಡುವುದಾಗಿಯೂ ತಿಳಿಸಿತ್ತು. ಹಾಗಾಗಿ ತಂಡವು ಕೊಯಿಕ್ಕೋಡು ಕೋರ್ಟ್ ಗೆ ಮೊರೆ ಹೋಗಿತ್ತು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೈಕ್ಕುಡಂ ಬ್ರಿಡ್ಜ್ ನ ಅನುಮತಿ ಇಲ್ಲದೇ ಈ ಹಾಡನ್ನು ಬಳಸುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ.

ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಅವರು ‘ಕಾಂತಾರ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಮತ್ತು ‘ನವರಸಂ..’ ಹಾಡಿನ ನಡುವೆ ಇರುವ ಸಾಮ್ಯತೆ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಆದರೆ, ಇದನ್ನು ಅಜನೀಶ್ ಅವರು ತಳ್ಳಿ ಹಾಕಿದ್ದರು. ನಾವು ನವರಸಂ ಹಾಡಿನಿಂದ ಸ್ಫೂರ್ತಿ ಪಡೆದಿದ್ದೇವೆ ಅಷ್ಟೇ ಎಂದು ಅಜನೀಶ್ ಲೋಕನಾಥ್ ಸ್ಪಷ್ಟನೆ ನೀಡಿದ್ದರು.