ಕಾನ್ ಚಲನಚಿತ್ರೋತ್ಸವ : ತೀರ್ಪುಗಾರರಾಗಿ ದೀಪಿಕಾ ಪಡುಕೋಣೆ ಆಯ್ಕೆ…

65
firstsuddi

ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ 75ನೇ ಕಾನ್ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರ ಆಯ್ಕೆಯಾಗಿದ್ದಾರೆ. ಮೇ 17 ರಿಂದ 28ರವರೆಗೆ 2022ರ ಕಾನ್ ಫಿಲ್ಮ್ ಫೆಸ್ಟಿವೆಲ್ ನಡೆಯಲಿದ್ದು, 75ನೇ ಕಾನ್ ಚಲನಚಿತ್ರೋತ್ಸವ ಜ್ಯೂರಿಯಾಗಿ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಕಾನ್ ಪೇಜ್ ನಲ್ಲೇ ಘೋಷಿಸಲಾಗಿದೆ.

ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರು 75ನೇ ಕಾನ್ ಚಲನಚಿತ್ರೋತ್ಸವದ ತೀರ್ಪುಗಾರರ(ಜ್ಯೂರಿ) ಅಧ್ಯಕ್ಷರಾಗಿರುತ್ತಾರೆ. ದೀಪಿಕಾ ಅವರೊಂದಿಗೆ ತೀರ್ಪುಗಾರರಲ್ಲಿ ನಟ – ನಿರ್ದೇಶಕಿ ರೆಬೆಕಾ ಹಾಲ್, ನೂಮಿ ರಾಪೇಸ್ ಮತ್ತು ಇಟಾಲಿಯನ್ ನಟಿ – ನಿರ್ದೇಶಕಿ ಜಾಸ್ಮಿನ್ ಟ್ರಿಂಕಾ, ಹಾಗೆಯೇ ನಿರ್ದೇಶಕರಾದ ಅಸ್ಗರ್ ಫರ್ಹಾದಿ, ಲಾಡ್ಜ್ ಲೈ, ಜೆಫ್ ನಿಕೋಲ್ಸ್ ಮತ್ತು ಜೋಕಿಮ್ ಟ್ರೈಯರ್ ಸೇರಿದ್ದಾರೆ.

ಒಟ್ಟು 21 ಸಿನಿಮಾಗಳು ಆಯ್ಕೆಯ ಸುತ್ತಿನಲ್ಲಿದ್ದು, ಎಂಟು ತೀರ್ಪುಗಾರರ ತಂಡವು ಪ್ರಶಸ್ತಿಗಾಗಿ ಸಿನಿಮಾಗಳನ್ನು ಆರಿಸಲಿದೆ. ಮೇ 28 ರಂದು ಕಾನ್ ನಲ್ಲಿ ನಡೆಯುವ ಸಮಾರಂಭದಲ್ಲಿ ವಿಜೇತರನ್ನು ಘೋಷಿಸುತ್ತಾರೆ.