ಕಾಫಿನಾಡಿನಲ್ಲಿ ಲವ್ ಜಿಹಾದ್ ಆರೋಪ – ಯುವಕನ ವಿರುದ್ಧ ಎಫ್‍ಐಆರ್ ದಾಖಲು…

115
firstsuddi

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಹೋದರಿಯ ಫೋಟೋ ಹಾಕಿದ್ದಾನೆ ಎಂದು ಆರೋಪಿಸಿ ಯುವತಿಯ ಸಹೋದರ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ರೋಫ್ ಎಂಬುವನ ವಿರುದ್ಧ ದೂರು ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣ ಸಂಬಂಧಿತ ಪ್ರಕರಣವಾದ್ದರಿಂದ ಸೆನ್ ಠಾಣೆಗೆ ದೂರು ನೀಡುವಂತೆ ಹರಿಹರಪುರ ಪೊಲೀಸರು ತಿಳಿಸಿದ್ದರು. ಅದರಂತೆ ದೂರು ನೀಡಿದರೂ ಸೆನ್ ಠಾಣೆ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸದ್ಯ ಆರೋಪಿ ಮೊಹಮ್ಮದ್ ರೋಫ್ ವಿರುದ್ಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಯುವತಿಯ ಸಹೋದರ ಎಸ್ಪಿಗೂ ಲಿಖಿತ ದೂರು ನೀಡಿದ್ದಾರೆ.