ಬೆಳಗಾವಿ : ಬಿಜೆಪಿ ಯುವ ಮುಖಂಡನ ನಿರ್ಲಕ್ಷತನಕ್ಕೆ ವಾಕಿಂಗ್ ತೆರಳಿದ್ದ ಇಬ್ಬರು ಮಹಿಳೆಯರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮುತಗಾ ಗ್ರಾಮದ ಬಳಿ ನಡೆದಿದೆ. ಸವಿತಾ ಪಾಟೀಲ್(44) ಹಾಗೂ ವಿದ್ಯಾ ಪಾಟೀಲ್(52) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಮೃತ ಮಹಿಳೆಯರು ನಿನ್ನೆ ರಾತ್ರಿ ಊಟ ಮುಗಿಸಿ ವಾಕಿಂಗ್‍ಗೆ ತೆರಳಿದ್ದ ವೇಳೆ ಬಿಜೆಪಿ ಮುಖಂಡ ಯುವರಾಜ್ ಜಾಧವ್ ಅವರ ಕಾರು ಇಬ್ಬರು ಮಹಿಳೆಯ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಶಾಂತಾ ಚೌಗುಲೆ ಎಂಬ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯುವರಾಜ್ ಜಾಧವ್ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದೇ ಈ ಘಟನೆಗೆ ಕಾರಣವಾಗಿದ್ದು, ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಜೆಪಿ ಯುವ ಮುಖಂಡ ಯುವರಾಜ್‍ನನ್ನು ಪೊಲೀಸರು ಬಂಧಿಸಿದ್ದಾರೆ.










