ತಿರುವನಂತಪುರಂ : ಕಾರು ಅಪಘಾತದಲ್ಲಿ 2019ರ ಮಿಸ್ ಕೇರಳ ವಿಜೇತೆ ಆನ್ಸಿ ಕಬೀರ್(24) ಹಾಗೂ ರನ್ನರ್ ಅಪ್ ಅಂಜನಾ ಶಾಜನ್(25) ಮೃತಪಟ್ಟಿದ್ದಾರೆ.
ನಿನ್ನೆ ಮಧ್ಯರಾತ್ರಿ ವೈಟ್ಟಿಲಾ-ಪಾಲಾರಿವಟ್ಟಂ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ನಲ್ಲಿ ಅಪಘಾತ ಸಂಭವಿಸಿದೆ. ಮಾಡೆಲಿಂಗ್ ಫೋಟೋ ಸೆಷನ್ ಗಾಗಿ ಆನ್ಸಿ ತಿರುವನಂತಪುರಂನಿಂದ ಮತ್ತು ಅಂಜನಾ ತ್ರಿಶೂರ್ ನ ತಮ್ಮ ಊರುಗಳಿಂದ ಕೊಚ್ಚಿಗೆ ಬಂದಿದ್ದರು. ಫೋಟೋಶೂಟ್ ಮುಗಿಸಿ ತ್ರಿಶೂರ್ ಗೆ ತೆರಳುತ್ತಿದ್ದಾಗ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಬೈಕ್ ಸವಾರ ಮಾತ್ರ ಸಣ್ಣ ಪುಟ್ಟ ಗಾಯಗೊಂದಿಗೆ ಪಾರಾಗಿದ್ದಾನೆ. ಆನ್ಸಿ ಮತ್ತು ಅಂಜನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು, ಇವರನ್ನು ಪಾಲಾರಿವಟ್ಟಂನ ಇಎಂಸಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.










