ಕಾಶ್ಮೀರಕ್ಕಾಗಿ ನಾವು ಪ್ರಾಣ ನೀಡಲೂ ಸಿದ್ದರಿದ್ದೇವೆ : ಅಮಿತ್ ಶಾ…

293
firstsuddi

ನವದೆಹಲಿ : ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಮತ್ತು 35(ಎ) ರದ್ದುಗೊಳಿಸಿದ ಬಗ್ಗೆ ಲೋಕಸಭೆಯಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು, ನೀವು ಜಮ್ಮು ಕಾಶ್ಮೀರವನ್ನು ರಾತ್ರಿ ಬೆಳಗಾಗುವುದರ ಒಳಗೆ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದೀರಿ. ಆದರೆ ನೀವು ಪಿಒಕೆ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ನೀವು ನಿಯಮಗಳನ್ನು ಉಲ್ಲಂಘಿಸಿ ರಾಜ್ಯಗಳನ್ನು ವಿಂಘಡನೆ ಮಾಡುತ್ತೀದ್ದೀರಿ ಎಂದು ಆರೋಪಿಸಿದ್ದರು. ಕೂಡಲೇ ಎದ್ದು ಇದಕ್ಕೆ ಸ್ಪಷ್ಟನೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕಾಶ್ಮೀರಕ್ಕಾಗಿ ನಾವು ಪ್ರಾಣ ನೀಡಲೂ ಸಿದ್ದರಿದ್ದೇವೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ನೀವು ಪಿಒಕೆಯನ್ನು ಪರಿಗಣಿಸಿಲ್ಲ ಎಂದು ಹೇಳುತ್ತೀದ್ದೀರಿ. ಆದರೆ ಪಿಒಕೆ ಸೇರಿದರೆ ಮಾತ್ರ ಜಮ್ಮು ಕಾಶ್ಮೀರ ಎಂದು ಹೇಳಲು ಸಾಧ್ಯ. ಜಮ್ಮು ಕಾಶ್ಮೀರ ಎಂದು ಹೇಳುವಾಗ ಪಾಕ್ ಆಕ್ರಮಿತ ಕಾಶ್ಮೀರ ಕೂಡಾ ಸೇರಿದಂತೆ ಹೇಳುತ್ತಿದ್ದೇನೆ. ನಾವು ಸಂವಿಧಾನದ ಪ್ರಕಾರವೇ ಇಂತಹ ಕ್ರಮಕೈಗೊಂಡಿದ್ದೇವೆ. ನಾವು ಈ ದಿನವನ್ನು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕು ಎಂದು ಹೇಳಿದರು.