ಕಿಡಿಯನ್ನು ಲೆಕ್ಕಿಸದೇ ಬೈಕ್ ಅನ್ನು ಎಳೆದೊಯ್ದ ಬೊಲೆರೊ ವಾಹನ.

28

ಸಂಭಲ್: ಬೈಕ್‍ಗೆ ಡಿಕ್ಕಿ ಹೊಡೆದ ಬೊಲೆರೊ ವಾಹನವೊಂದು ಆ ಬೈಕ್ ಅನ್ನು 2 ಕಿ.ಮೀ ವರೆಗೆ ಎಳೆದುಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಸಂಭಲ್‍ನಲ್ಲಿ ನಡೆದಿದೆ. ಬೈಕ್‍ನಿಂದ ಬೆಂಕಿಯ ಕಿಡಿ ಬರುತ್ತಿದ್ದರೂ ಅದನ್ನು ಲೆಕ್ಕಿಸದೇ, ಅತಿ ವೇಗವಾಗಿ ಸಾಗಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾನುವಾರ ಸಂಜೆ ನಡೆದ ಈ ಭಯಾನಕ ಅಪಘಾತದ ದೃಶ್ಯಗಳು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಎಸ್‍ಯುವಿಯಲ್ಲಿ ಗ್ರಾಮ್ ಪ್ರಧಾನ್ ಎಂಬ ಹೆಸರಿನ ಬಿಜೆಪಿ ಸ್ಟಿಕರ್ ಕಂಡುಬಂದಿದೆ. ಸಂಭಲ್‍ನ ಕೊಟ್ವಾಲಿ ಪ್ರದೇಶದಲ್ಲಿನ ಮೊರದಬಾದ್‍ನ ವಜಿದ್ಪುರಮ್ ನಂತರ ಈ ಘಟನೆ ಸಂಭವಿಸಿದೆ. ಮೊರ್ದಾಬಾದ್ ಜಿಲ್ಲೆಯ ಸುಖ್ವೀರ್ ಭಾನುವಾರ ಮಾವನ ಮನೆಯಿಂದ ಸಂಭಲ್‍ನ ಹಯತ್‍ನಗರದಲ್ಲಿರುವ ತನ್ನ ಮನೆಗೆ ಮರಳಿ ಸಾಗುತ್ತಿದ್ದರು. ಈ ವೇಳೆ ಮೊರದಾಬಾದ್ ರಸ್ತೆಯಲ್ಲಿ ಎಸ್‍ಯುವಿ ವಾಹನ ಡಿಕ್ಕಿಯಾಗಿದೆ. ಗಾಯಗೊಂಡ ಸುಖ್ವೀರ್ ಅವರನ್ನು ತಕ್ಷಣಕ್ಕೆ ಸಂಭಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೊರದಾಬಾದ್‍ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಲಾಗಿದೆ. ಗಾಯಗೊಂಡಿರುವ ಸುಖ್ವೀರ್ ಅವರಿಂದ ಸೋಮವಾರ ಪೊಲೀಸರು ಇಲಾಖೆಯವರು ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಕುರಿತು ಮಾತಾಡಿರುವ ಪೊಲೀಸ್ ಅಧಿಕಾರಿ ಅನುಜ್ ಕುಮಾರ್, ಹೃದಯಹೀನ ಕೃತ್ಯ ಎಸಗಿರುವ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಸ್‍ಯುವಿಯನ್ನು ಕೂಡ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿದಿದೆ ಎಂದು ತಿಳಿಸಿದರು.