ಕುಂದೂರಿನ ಯುವತಿಗೆ ಪಿಹೆಚ್‍ಡಿ ಪದವಿ.

78
firstsuddi

ಚಿಕ್ಕಮಗಳೂರು: ಜಿಲ್ಲೆಯ ಕುಂದೂರಿನ ಯುವತಿ ಕೆ.ಎ.ಅಪೂರ್ವ ಅವರು ಮಂಡಿಸಿದ ಮಹಾಪ್ರಬಂದಕ್ಕೆ ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾನಿಲಯ ಪಿಹೆಚ್‍ಡಿ ಪದವಿ ನೀಡಿದೆ.

ಅಪೂರ್ವ ಅವರು ಪ್ರೋ.ಬಿ.ಫಕ್ರುದ್ದೀನ್ ಅವರ ಮಾರ್ಗದರ್ಶನದಲ್ಲಿ ಟೊಮೇಟೊ ಮ್ಯಾಜಿಕ್ ರಿಲ್ಸ್ ಸಮೂಹದಲ್ಲಿ ಎಲೆ ಸುರುಳಿ ವೈರಸ್ ಮತ್ತು ಎಲೆ ಚುಕ್ಕೆ ವೈರಸ್ ರೋಗಗಳ ನಿರೋಧಕ ಕ್ಯೂಟಿಎಲ್‍ಎಸ್ ನಕ್ಷೀಕರಣ ಮತ್ತು ಮೈಕ್ರೋ ಆರ್‌ಎನ್‌ಎಗಳು ಹಾಗೂ ಸಂಬಂಧಿತ ಜೀನ್‍ಗಳ ಅಭಿವ್ಯಕ್ತಿ ಸಂಕ್ಷೀಪಣೆ ವಿಷಯ ಕುರಿತು ಮಹಾಪ್ರಬಂದ ಮಂಡಿಸಿದ್ದರು.

ಜುಲೈ ತಿಂಗಳಿನಲ್ಲಿ ನಡೆಯಲಿರುವ ವಿವಿಯ ಘಟಿಕೋತ್ಸವದಲ್ಲಿ ರಾಜ್ಯಪಾಲ ತ್ಯಾವರ್ ಚಂದ್ ಗೆಹ್ಲೋಟ್ ಅವರು ಅಪೂರ್ವ ಅವರಿಗೆ ಪದವಿ ಪ್ರಧಾನ ಮಾಡಲಿದ್ದಾರೆ. ಕೆ.ಎ.ಅಪೂರ್ವ ಅವರು ಸಾಹಿತಿ ಕುಂದೂರು ಅಶೋಕ್ ಹಾಗೂ ಚಂಚಲಾಕ್ಷಿ ಅವರ ಪುತ್ರಿಯಾಗಿದ್ದಾರೆ.