ಕುಖ್ಯಾತ ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್…

67
firstsuddi

ನೆಲಮಂಗಲ : ಕುಖ್ಯಾತ ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ನೆಲಮಂಗಲದ ಬಿನ್ನಮಂಗಲದ ಬಳಿ ನಡೆದಿದೆ.

ಪ್ರಕರಣವೊಂದರಲ್ಲಿ ದರೋಡೆಕೋರ ಯೋಗಾನಂದ್ ಬಂಧನವಾಗಿತ್ತು. ಸ್ಥಳ ಮಹಜರು ವೇಳೆ ಆರೋಪಿ ಪೊಲೀಸರ ಮೇಲೆ ಹಾಲೋಬ್ರಿಕ್ ನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಹನುಮಂತ ಹಿಪ್ಪರಿಗಿ ಗಾಯಗೊಂಡಿದ್ದಾರೆ. ಆತ್ಮರಕ್ಷಣೆಗಾಗಿ ನೆಲಮಂಗಲ ಟೌನ್ ಸಿಪಿಐ ಶಶಿಧರ್ ಆರೋಪಿ ಯೋಗಾನಂದ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿಯನ್ನ ನೆಲಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಗಾಯಗೊಂಡ ಕಾನ್ಸ್ಟೇಬಲ್ ಹನುಮಂತ ಹಿಪ್ಪರಗಿ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.