ಕುವೆಂಪು ವಿವಿಯ ವೆಬ್​ಸೈಟ್ ಹ್ಯಾಕ್- ದೂರು ದಾಖಲು…

46
firstsuddi

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್​ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ. ಈ ಕುರಿತು ಕುವೆಂಪು ವಿವಿಯ ಒಂದು ಟೀಂ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಆ್ಯಂಟಿ ಇಸ್ರೇಲ್ ಪ್ಯಾಲೆಸ್ಟೈನ್​ನ ಜಕಾರ್ತಾ ಮೂಲದಿಂದ ಹ್ಯಾಕ್ ಆಗಿದ್ದು, ಕಲಿಂಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ಹ್ಯಾಕ್ ಮಾಡಿದೆ ಎಂದು ತಿಳಿದುಬಂದಿದೆ. ಸೇವ್ ಪ್ಯಾಲೆಸ್ಟೈನ್​–ಇಸ್ರೇಲ್ ಡಾಗ್ ಎಂದು ವೆಬ್​ಸೈಟ್​ನಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವವಿದ್ಯಾಲಯದ ಅಧಿಕೃತ ವೆಬ್​ಸೈಟ್ ಹ್ಯಾಕ್ ಆಗಿರುವುದರಿಂದ ವಿವಿಯ ಟೆಕ್ನಿಕಲ್ ಟೀಂ ವೆಬ್ ಸೈಟ್ ಸೇವೆಯನ್ನು ಸ್ಥಗಿತಗೊಳಿಸಿದ್ದು, ತಾಂತ್ರಿಕ ತಂಡದಿಂದ ವೆಬ್​ಸೈಟ್ ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ.