ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ವೀಡಿಯೋ ಚಿತ್ರೀಕರಿಸಿದ್ದ ಯೂಟ್ಯೂಬರ್ ಬಂಧನ…

35
firstsuddi

ಬೆಂಗಳೂರು: ನಗರದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಯೂಟ್ಯೂಬರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಮೂಲಕ ವಿಕಾಸ್ ಗೌಡ ಬಂಧಿತ ಯೂಟ್ಯೂಬರ್. ವಿಕಾಸ ಗೌಡ ರನ್ ವೇನಲ್ಲಿ ವೀಡಿಯೋ ಮಾಡಿ ತನ್ನ ಯೂಟ್ಯೂಬ್​ನಲ್ಲಿ ಅಪ್ಲೋಡ್ ಮಾಡಿದ್ದನು. ವೀಡಿಯೋದಲ್ಲಿ “ಟಿಕೆಟ್ ಇಲ್ಲದೆ ಒಳಗಡೆ ಬಂದಿದ್ದೇನೆ, 24 ಗಂಟೆ ರನ್ ವೇ ಬಳಿಯೇ ಇದ್ದೆ. ಎಲ್ಲ ಅಧಿಕಾರಿಗಳ, ಸಿಬ್ಬಂದಿ ಕಣ್ಣುತಪ್ಪಿಸಿ ವಿಮಾನ ನಿಲ್ದಾಣದ ಒಳಗೆ ಪ್ರವೇಶ ಮಾಡಿ, ವಿಡಿಯೋ ಮಾಡಿದ್ದೇನೆ” ಎಂದು ಹೇಳಿದ್ದನು. ಈ ವಿಡಿಯೋವನ್ನು ನೋಡಿದ ಸಿಐಎಸ್ಎಫ್ ಅಧಿಕಾರಿಗಳು ವಿಕಾಸಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ವಿಕಾಸ್ಗೌಡನನ್ನು ಬಂಧಿಸಿದ್ದಾರೆ.

ನಂತರ ಪೊಲೀಸರು ವಿಚಾರಣೆ ನಡೆಸಿದಾಗ ” ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದಿದ್ದೇನೆ. ಆದರೆ ಪ್ರಯಾಣಿಸದೆ ರನ್ ವೇನಲ್ಲೆ ಉಳಿದುಕೊಂಡೆ. ಸುಮಾರು 4-5 ಗಂಟೆಗಳ ಕಾಲ ಅಲ್ಲಿಯೇ ಇದ್ದು, ವಿಡಿಯೋ ಮಾಡಿಕೊಂಡು ಬಂದೆ ಎಂದು ಹೇಳಿದ್ದಾನೆ.

ಬೆಂಗಳೂರು ಮೂಲದ ವಿಕಾಸ್ ಗೌಡ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ 1.3 ಲಕ್ಷ ಅನುಯಾಯಿಗಳನ್ನು ಹೊಂದಿದ್ದು, ತನ್ನ ವೀಡಿಯೊಗಳಿಗೆ ಹೆಚ್ಚು ವೀಕ್ಷಣೆಯನ್ನು ಪಡೆಯಲು ಸಾಹಸಗಳನ್ನು ಕೈಗೊಳ್ಳುತ್ತಿದ್ದರು. ವಿಕಾಸ್ ಗೌಡ ಯೂಟ್ಯೂಬ್ ಖಾತೆಯಲ್ಲಿ 60 ವೀಡಿಯೊಗಳನ್ನು ಹಾಕಿದ್ದು ಪ್ರತಿಯೊಂದಕ್ಕೂ ವೀಕ್ಷಣೆಗಳು 2.5 ಲಕ್ಷದಿಂದ 3.5 ರ ನಡುವೆ ಇದೆ.

ಸದ್ಯ ಈ ಬಗ್ಗೆ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.