ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ.

70
firstsuddi

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರಗತಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅನಾವರಣಗೊಳಿಸಿದರು. ಪ್ರತಿಮೆ ಅನಾವರಣ ಮಾಡಿದ ನಂತರ ಸಾರ್ವಜನಿಕ ಸಭೆಗೆ ತೆರಳಿದರು.

ಕೆಂಪೇಗೌಡ ಕಂಚಿನ ಪ್ರತಿಮೆ ಒಟ್ಟು ತೂಕ 218 ಟನ್ ಆಗಿದ್ದು, ಪ್ರತಿಮೆಯ ಖಡ್ಗದ ತೂಕ 4 ಟನ್ ಇದೆ. ಈ ಪ್ರತಿಮೆಗೆ 98 ಟನ್ ಕಂಚು ಮತ್ತು 120 ಟನ್ ಹುಕ್ಕು ಬಳಕೆ ಮಾಡಲಾಗಿದೆ.

23 ಎಕರೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಿಸಲಾಗಿದೆ. ಕೆಂಪೇಗೌಡ ಪ್ರತಿಮೆ, ಥೀಮ್ ಪಾರ್ಕ್ ಗೆ ಒಟ್ಟು 84 ಕೋಟಿ ರೂ. ವೆಚ್ಚ ತಗುಲಿದೆ.