ಕೆಆರ್‌ಎಸ್ ,ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಬೊಮ್ಮಾಯಿ.

59
firstsuddi

ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕಿಂದು ವೃಶ್ಚಿಕ ಲಗ್ನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಾಗಿನ ಅರ್ಪಿಸಿದ್ದಾರೆ. ಇದಕ್ಕೂ ಮುನ್ನ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಬಿದಿರಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಅಭಿಜಿನ್ ಮುಹೂರ್ತದ ಕನ್ಯಾ ಲಗ್ನದಲ್ಲಿ ಸಿಎಂ ಹಾಗು ಅವರ ಪತ್ನಿ ಬಾಗಿನ ಅರ್ಪಿಸಿದರು.

ಬೊಮ್ಮಾಯಿ ಅವರು 2ನೇ ಬಾರಿಗೆ ಬಾಗಿನ ಅರ್ಪಿಸಿದ್ದಾರೆ. ಕೆಆರ್ ಎಸ್ ಜಲಾಶಯ ಸಾಮಾನ್ಯವಾಗಿ ಆಗಸ್ಟ್ ನಲ್ಲಿ ಭರ್ತಿಯಾಗುತ್ತಿದ್ದರಿಂದ ಒಂದು ವರ್ಷ ಕಾಯಬೇಕಿತ್ತು. ಆದರೆ ಈ ಬಾರಿ ಮೂರು ತಿಂಗಳ ಮುಂಚೆಯೇ ಭರ್ತಿಯಾಗಿದ್ದು, 8 ತಿಂಗಳಲ್ಲೇ 2 ಬಾರಿ ಬಾಗಿನ ಅರ್ಪಿಸುವ ಅವಕಾಶ ಒದಗಿಬಂದಿದೆ.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ ಗೌಡ, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.