ಕೇಂದ್ರ ಸಂಪುಟ ಪುನರ್ ರಚನೆ – ರಾಜ್ಯದ ನಾಲ್ವರಿಗೆ ಯಾವ ಖಾತೆ ಗೊತ್ತಾ?

104
firstsuddi

ನವದೆಹಲಿ : ಪ್ರಧಾನಿ ಮೋದಿ ಸಂಪುಟಕ್ಕೆ ಭರ್ಜರಿ ಸರ್ಜರಿಯಾಗಿದೆ. 36 ಹೊಸಬರು ಸೇರಿ 43 ಮಂದಿ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಪೈಕಿ ರಾಜ್ಯದ ನಾಲ್ವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದು, ರಾಜ್ಯದಿಂದ ಕೇಂದ್ರ ಸಚಿವ ಸ್ಥಾನಕ್ಕೆ ಆಯ್ಕೆಯಾದ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಸಂಪುಟ ಪುನರ್ ರಚನೆಯಲ್ಲಿ ಕರ್ನಾಟಕದ ನಾಲ್ವರು ಕೇಂದ್ರ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜೀವ್ ಚಂದ್ರಶೇಖರ್ ಅವರಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಖಾತೆಗಳ ರಾಜ್ಯ ಸಚಿವ ಸ್ಥಾನ ಒಲಿದು ಬಂದಿದೆ. ಮಹಿಳಾ ಮಣಿಗಳಲ್ಲಿ ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾಗಿ ಆಯ್ಕೆಯಾಗಿದ್ದು, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎ. ನಾರಾಯಣಸ್ವಾಮಿಗೆ  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಸ್ಥಾನ ಒಲಿದುಬಂದಿದೆ. ಬೀದರ್ ನ ಭಗವಂತ ಖೂಬಾ ಅವರು ಹೊಸ ಮತ್ತು ನವೀಕರಣ ಮಾಡಬಹುದಾದ ಶಕ್ತಿ ಸಂಪನ್ಮೂಲ ಖಾತೆ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವರಾಗಿ ಆಯ್ಕೆಯಾಗಿದ್ದಾರೆ. ಈ ನಾಲ್ವರೊಂದಿಗೆ ಕೇಂದ್ರ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಚಿವರ ಸಂಖ್ಯೆ ಆರಕ್ಕೇರಿದೆ.

ಯಾರಿಗೆ, ಯಾವ ಖಾತೆ?
ಪ್ರಧಾನಿ ನರೇಂದ್ರ ಮೋದಿ- ವಿಜ್ಞಾನ ಮತ್ತು ತಂತ್ರಜ್ಞಾನ
ರಾಜನಾಥ್ ಸಿಂಗ್: ರಕ್ಷಣಾ ಖಾತೆ
ಅಮಿತ್ ಶಾ: ಗೃಹ, ಸಹಕಾರ ಖಾತೆ
ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ನಿರ್ಮಲಾ ಸೀತಾರಾಮನ್: ಹಣಕಾಸು, ಕಾರ್ಪೊರೇಟ್ ವ್ಯವಹಾರಗಳ
ನರೇಂದ್ರ ಸಿಂಗ್ ತೋಮರ್: ಕೃಷಿ ಮತ್ತು ರೈತ ಕಲ್ಯಾಣ ಸಚಿವ
ಎಸ್ ಜೈಶಂಕರ್: ವಿದೇಶಾಂಗ ಸಚಿವ
ಅರ್ಜುನ್ ಮುಂಡಾ: ಬುಡಕಟ್ಟು ವ್ಯವಹಾರಗಳ ಸಚಿವ
ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ
ಪಿಯೂಷ್ ಗೋಯಲ್: ವಾಣಿಜ್ಯ ಮತ್ತು ಕೈಗಾರಿಕಾ, ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣಾ, ಜವಳಿ ಸಚಿವ
ಧರ್ಮೇಂದ್ರ ಪ್ರಧಾನ್: ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ
ಪ್ರಲ್ಹಾದ್ ಜೋಶಿ: ಸಂಸದೀಯ ವ್ಯವಹಾರ, ಕಲ್ಲಿದ್ದಲು, ಗಣಿ
ನಾರಾಯಣ್ ರಾಣೆ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ
ಸರ್ಬಾನಂದ ಸೋನೊವಾಲ್: ಬಂದರು, ಹಡಗು ಮತ್ತು ಜಲಮಾರ್ಗ, ಆಯುಷ್
ಮುಖ್ತಾರ್ ಅಬ್ಬಾಸ್ ನಖ್ವಿ: ಅಲ್ಪಸಂಖ್ಯಾತ ವ್ಯವಹಾರಗಳ
ಡಾ.ವಿರೇಂದ್ರ ಕುಮಾರ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಗಿರಿರಾಜ್ ಸಿಂಗ್: ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
ಜ್ಯೋತಿರಾಧಿತ್ಯ ಸಿಂಧಿಯಾ: ನಾಗರಿಕ ವಿಮಾನಯಾನ ಸಚಿವ
ರಾಮಚಂದ್ರ ಪ್ರಸಾದ್ ಸಿಂಗ್: ಉಕ್ಕಿನ ಸಚಿವ
ಅಶ್ವಿನಿ ವೈಷ್ಣವ್: ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ
ಪಶುಪತಿ ಕುಮಾರ್ ಪಾರಸ್: ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವ
ಗಜೇಂದ್ರ ಸಿಂಗ್ ಶೇಖಾವತ್: ಜಲ ಶಕ್ತಿ ಸಚಿವ
ಕಿರನ್ ರಿಜಿಜು: ಕಾನೂನು ಮತ್ತು ನ್ಯಾಯ ಮಂತ್ರಿ
ರಾಜ್ ಕುಮಾರ್ ಸಿಂಗ್: ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ
ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ
ಮನ್ಸುಖ್ ಮಾಂಡವಿಯಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ
ಭೂಪೇಂದರ್ ಯಾದವ್: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಕಾರ್ಮಿಕ ಮತ್ತು ಉದ್ಯೋಗ ಸಚಿವ
ಮಹೇಂದ್ರ ನಾಥ್ ಪಾಂಡೆ: ಭಾರಿ ಕೈಗಾರಿಕಾ ಸಚಿವ
ಪರ್ಶೋತ್ತಮ್ ರೂಪಾಲ: ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರ ಸಚಿವ
ಜಿ ಕಿಶನ್ ರೆಡ್ಡಿ: ಸಂಸ್ಕೃತಿ, ಪ್ರವಾಸೋದ್ಯಮ, ಈಶಾನ್ಯ ಅಭಿವೃದ್ಧಿ ಸಚಿವ
ಅನುರಾಗ್ ಠಾಕೂರ್: ಮಾಹಿತಿ ಮತ್ತು ಪ್ರಸಾರ, ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ