ಮುಂಬೈ : ಮುಖ್ಯಮಂತ್ರಿ ನಿಧಿಯಲ್ಲಿದ್ದ 40 ಸಾವಿರ ಕೋಟಿ ರೂ ಹಣವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲು ಬಿಜೆಪಿ ಸರ್ಕಾರ ರಚನೆಯ ಡ್ರಾಮಾ ಮಾಡಬೇಕಾಯಿತು ಎಂಬ ಸಂಸದ ಅನಂತ್‍ಕುಮಾರ್ ಹೆಗ್ಡೆ ಹೇಳಿಕೆಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಾವು ಯಾವುದೇ ರೀತಿಯ ಹಣವನ್ನು ರವಾನಿಸಿಲ್ಲ. ಅಂತಹ ತೀರ್ಮಾನವನ್ನು ನಾವು ಕೈಗೊಂಡಿಲ್ಲ. ಈ ಬಗ್ಗೆ ಹಣಕಾಸು ಇಲಾಖೆಯವರು ತನಿಖೆ ನಡೆಸಿ ಸತ್ಯಾಂಶ ಹೊರತರಲಿ ಎಂದು ಹೇಳಿದ್ದಾರೆ.










