ಕೇಳಿದ ನಾಯಿಯನ್ನು ಕೊಡಿಸಲಿಲ್ಲವೆಂದು ಮನನೊಂದ ಯುವಕ ಆತ್ಮಹತ್ಯೆ…

55
firstsuddi

ಹುಬ್ಬಳ್ಳಿ: ತಾನು ಕೇಳಿದ ನಾಯಿಯನ್ನು ಪೋಷಕರು ಕೊಡಿಸಲಿಲ್ಲವೆಂದು ಮನನೊಂದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮಿಷನ್ ಕಾಂಪೌಂಡ್‌ನಲ್ಲಿ ನಡೆದಿದೆ.

ಅಲೆನ್ ಭಸ್ಮೆ (24) ಆತ್ಮಹತ್ಯೆಗೆ ಶರಣಾದ ಯುವಕ. ಅಲೆನ್ ನಾಯಿ ಪ್ರೇಮಿಯಾಗಿದ್ದು, 2 ಲಕ್ಷ ರೂ. ಮೌಲ್ಯದ ನಾಯಿಮರಿಯನ್ನು ಕೊಡಿಸುವಂತೆ ತಾಯಿಯ ಬಳಿ ಹಠ ಮಾಡುತ್ತಿದ್ದ.

ಮಗನ ಕಾಟಕ್ಕೆ ಬೇಸತ್ತು ಅಲೆನ್ ತಾಯಿ ಮನೆ ಬಿಟ್ಟು ಹೋಗಿದ್ದರು. ಇದರಿಂದ ಮನನೊಂದ ಅಲೆನ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಸಂಬಂಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.