ಕೊಟ್ಟಿಗೆಹಾರ : ಅನಾಥ ವೃದ್ದೆಯನ್ನು ರಕ್ಷಿಸಿದ ಸಮಾಜಸೇವಕ ಸ್ನೇಕ್ ಆರೀಪ್…

1095
firstsuddi

ಕೊಟ್ಟಿಗೆಹಾರ : ಬಣಕಲ್ ಪಟ್ಟಣದಲ್ಲಿ ಕಳೆದ ಒಂದು ತಿಂಗಳಿಂದ ಬೀಡು ಬಿಟ್ಟಿದ್ದ ಅನಾಥ ವೃದ್ದೆಯೊಬ್ಬರನ್ನು ರಕ್ಷಿಸಿ ಸಮಾಜಸೇವಕ ಸ್ನೇಕ್ ಆರೀಪ್ ಕಳಸದ ದಿವ್ಯ ಕಾರುಣ್ಯಾಲಯ ಅನಾಥಾಶ್ರಮಕ್ಕೆ ದಾಖಲಿಸಿದರು. ಆಂದ್ರದಿಂದ ಬಂದಿರುವುದಾಗಿ ವೃದ್ದೆ ಹೇಳುತ್ತಿದ್ದು ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಮಳೆ ಗಾಳಿಯ ನಡುವೆ ಮಲಗಿದ್ದ ವೃದ್ದೆಯನ್ನು ಸಮಾಜಸೇವಕ ಆರೀಪ್ ಶುಶ್ರೂಷೆ ಮಾಡಿ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಉಪಹಾರ ನೀಡಿ ಶುಶ್ರೂಷೆ ಮಾಡಿದರು. ನಂತರ ತಮ್ಮ ವಾಹನದಲ್ಲೆ ಕಳಸದ ದಿವ್ಯ ಕಾರುಣ್ಯಾಲಯ ಅನಾಥಾಶ್ರಮಕ್ಕೆ ದಾಖಲಿಸಿದರು.