ಕೊಡಗು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರ ಮೇಲೆ ಗುಂಡು ಹಾರಿಸಲು ಯತ್ನ…

57
firstsuddi

ಮಡಿಕೇರಿ : ಕೊಡಗಿನ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಹಾಗೂ ವಕೀಲ ಪಿ.ಕೃಷ್ಣಮೂರ್ತಿಯವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಲು ಯತ್ನಿಸಿರುವ ಘಟನೆ ನಿನ್ನೆ ರಾತ್ರಿ ಮಡಿಕೇರಿ ಸಮೀಪ ಚೆಟ್ಟಳ್ಳಿ ಬಳಿಯ ಅಬ್ಯಾಲದಲ್ಲಿ ನಡೆದಿದೆ.

ಕೃಷ್ಣಮೂರ್ತಿಯವರು ಚೆಟ್ಟಳ್ಳಿಯಿಂದ ಮಡಿಕೇರಿಗೆ ಬರುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ. ಆದರೆ ಕೃಷ್ಣಮೂರ್ತಿಯವರಿಗೆ ತಗುಲಿದ್ದ ಗುಂಡು ಕಾರಿಗೆ ಬಿದ್ದಿದೆ. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೃಷ್ಣಮೂರ್ತಿ ದೂರು ನೀಡಿದ್ದಾರೆ. ಸ್ಥಳಕ್ಕೆ ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.