ಕೊಪ್ಪದ ಕಾಫಿ ಬೆಳೆಗಾರ, ಶತಾಯುಷಿ, ಡೇಮಿಯನ್ ಡಿ.ಕುನ್ಹಾ (101) ನಿಧನ…

79
firstsuddi

ಚಿಕ್ಕಮಗಳೂರು: ಕೊಪ್ಪದ ಕಾಫಿ ಬೆಳೆಗಾರ, ಶತಾಯುಷಿ, ಡೇಮಿಯನ್ ಡಿ.ಕುನ್ಹಾ (101) ಅವರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿಧನರಾದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಬ್ಬರು ಪುತ್ರರು ಮತ್ತು ಆರು ಜನ ಪುತ್ರಿಯರನ್ನು ಅಗಲಿದ್ದಾರೆ.
1922ರಲ್ಲಿ ಜನಿಸಿದ ಅವರು ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗೆ ಸಮರ್ಪಿಸಿಕೊಂಡಿದ್ದರು. ಬಡವರ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಅವರಿಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದವು.

1961ರಲ್ಲಿ ಅಂದಿನ ಪೋಪ್ ಜಗದ್ಗುರುಗಳು ಡೇಮಿಯನ್ ಡಿ.ಕುನ್ಹಾ ಅವರಿಗೆ ‘ಬೆನೆಮೆರೆಂತಿ’ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು.