ಕೊರೊನಾ ಅಟ್ಟಹಾಸದ ನಡುವೇ ಭಾರತದಲ್ಲಿ ಮತ್ತೊಂದು ಭಯಾನಕ ವೈರಸ್ ಪತ್ತೆ…

125
firstsuddi

ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಅಟ್ಟಹಾಸದ ನಡುವೆಯೇ ಈಗಾ ಮತ್ತೊಂದು ವೈರಸ್ ಭಾರತದಲ್ಲಿ ಪತ್ತೆಯಾಗಿದ್ದು, ಈ ವೈರಸ್ ಕೊರೊನಾ ವೈರಸ್‍ಗಿಂತಲೂ ಭಯಾನಕವಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ಕೊರೊನಾಗಿಂತಲೂ ಭಯಾನಕವಾಗಿರುವ ಕ್ಯಾಟ್ ಕ್ಯೂ ಎಂಬ ವೈರಸ್ ಚೀನಾದಿಂದಲೇ ಹರಡುತ್ತಿದೆ. ಈ ವೈರಸ್ ಸೊಳ್ಳೆಗಳಿಂದ ಜನರಿಗೆ ಹರಡುತ್ತವೆ ಎಂದು ತಿಳಿದು ಬಂದಿದ್ದು, ಹಂದಿಗಳಿಗೆ ಕಚ್ಚಿದ ಸೊಳ್ಳೆಗಳು ಮನುಷ್ಯನಿಗೆ ಕಚ್ಚಿದರೆ ಈ ವೈರಸ್ ಹರಡುತ್ತದೆ ಎಂದು ಐಸಿಎಂಆರ್ ಎಚ್ಚರಿಕೆ ನೀಡಿದೆ.