ಕೊರೊನಾ ಮೂರನೇ ಅಲೆ ಆರಂಭ – ಬೆಂಗಳೂರಿನಲ್ಲಿ 10 ದಿನದಲ್ಲಿ 505 ಮಕ್ಕಳಲ್ಲಿ ಸೋಂಕು ಪತ್ತೆ!

108
firstsuddi

ಬೆಂಗಳೂರು : ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಎನ್ನುವ ತಜ್ಞರ ಎಚ್ಚರಿಕೆಯ ಬೆನ್ನಲ್ಲೇ ಇದೀಗ ನಗರದಲ್ಲಿ ಕಳೆದ 10 ದಿನಗಳ ವರದಿಯಲ್ಲಿ 505 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.

ಆಗಸ್ಟ್ 1ರಿಂದ 10ರ ತನಕ ಕಳೆದ ಹತ್ತು ದಿನಗಳಲ್ಲಿ ನಗರದಲ್ಲಿ 505 ಮಕ್ಕಳು ಕೊರೊನಾ ಬಾಧಿತರಾಗಿದ್ದಾರೆ. ಅದರಲ್ಲಿ 246 ಹೆಣ್ಣುಮಕ್ಕಳು ಮತ್ತು 259 ಗಂಡು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.