ಮಂಗಳೂರು : ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು 5 ವರ್ಷದ ಬಾಲಕ ತಾನು ಕೂಡಿಟ್ಟಿದ್ದ ಪಾಕೆಟ್ ಮನಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾನೆ. ಅತಾ-ವುರ್-ರೆಹ್ಮಾನ್ ಎಂಬ ಬಾಲಕ ತನ್ನ ಪಾಕೆಟ್ ಮನಿಯನ್ನು ನೀಡಿದ್ದಾನೆ. ಭಟ್ಕಳ ಮೂಲದವರಾದ ರೆಹ್ಮಾನ್ ಅವರ ಕುಟುಂಬಸ್ಥರು ಈಗಾ ಮಂಗಳೂರಿನ ಫಳ್ನೀರ್ ನಲ್ಲಿ ನೆಲೆಸಿದ್ದು, ಬಾಲಕ ತನ್ನ ತಂದೆ ತಾಯಿ ನೀಡುತ್ತಿದ್ದ ಪಾಕೆಟ್ ಮನಿಯನ್ನು ಹುಂಡಿಯಲ್ಲಿ ಹಾಕುತ್ತಿದ್ದ. ಕಳೆದ ಮೂರು ದಿನಗಳಿಂದ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರ ದೇಣಿಗೆ ಕೇಳುತ್ತಿರುವುದನ್ನು ಮನಗಂಡ ಬಾಲಕ ತನ್ನ ಪಾಕೆಟ್ ಮನಿಯನ್ನು ದೇಣಿಗೆಯಾಗಿ ನೀಡಲು ನಿರ್ಧರಿಸಿದ್ದು, ಬಾಲಕನ ನಿರ್ಧಾರಕ್ಕೆ ಪ್ರೋತ್ಸಾಹಿಸಿದ ತಂದೆ ತಾಯಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ಮೂಲಕ ಬಾಲಕ ತಾನು ಕೂಡಿಟ್ಟಿದ್ದ ಪಾಕೆಟ್ ಮನಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಿದ್ದು, ಪುಟ್ಟ ಬಾಲಕನ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.










