ಮಡಿಕೇರಿ : ಕೊರೊನಾ ಸೋಂಕು ಇಳಿಮುಖವಾದ ಹಿನ್ನಲೆ ಕೊಡಗು ಅನ್ ಲಾಕ್ ಆಗಿದೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಯಂತೆಯೇ 3.0 ಮಾರ್ಗ ಸೂಚಿ ಕ್ರಮಗಳು ಜಾರಿಯಾಗಿವೆ.
ಈ ಹಿಂದೆ ರಾಜ್ಯದಲ್ಲಿ ಕೊಡಗು ಜಿಲ್ಲೆ ಹೊರತು ಪಡಿಸಿ ಅನ್ ಲಾಕ್ 3.0 ಜಾರಿ ಮಾಡಲಾಗಿತ್ತು. ಇದೀಗ ಸೋಂಕು ಇಳಿಕೆ ಕಂಡಿರುವುದರಿಂದ ಜಿಲ್ಲೆಯನ್ನು ಅನ್ ಲಾಕ್ ಮಾಡಲಾಗಿದ್ದು, ಜನ ಸ್ವಲ್ಪ ಮಟ್ಟಿಗೆ ನಿರಾಳಗೊಂಡಿದ್ದಾರೆ.
ಅನ್ ಲಾಕ್ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ಅಧಿಸೂಚನೆ ಹೊರಡಿಸಿದ್ದು, ಕೊಡಗು ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ದರದಲ್ಲಿ ಕಡಿಮೆಗೊಂಡಿದೆ. ಹೀಗಾಗಿ ಈ ಕೂಡಲೇ ಜಾರಿಗೆ ಬರುವಂತೆ ಕೊಡಗು ಜಿಲ್ಲೆಯನ್ನು ಅನ್ ಲಾಕ್ 3.0 ಮಾರ್ಗಸೂಚಿ ಕ್ರಮಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ.
ಕೊಡಗಿನಲ್ಲಿ ದೇವಸ್ಥಾನ ಸೇರಿದಂತೆ ಇತರೆ ಚಟುವಟಿಕೆಗಳು ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶ ಸಿಗಲಿದೆ. ಜೊತೆಗೆ ವಾರಾಂತ್ಯ ಕರ್ಪ್ಯೂ ರದ್ದುಗೊಂಡು, ನೈಟ್ ಕರ್ಪ್ಯೂ ಮಾತ್ರ ಮುಂದುವರೆಯಲಿದೆ.










