ಕೊರೊನಾ ಸೋಂಕು ತಗುಲಿದೆ ಎಂದು ಪೇದೆ ಆತ್ಮಹತ್ಯೆಗೆ ಶರಣು…

157
firstsuddi

ಬೆಂಗಳೂರು : ಕೊರೊನಾ ಸೋಂಕು ತಗುಲಿದೆ ಎಂದು ಕಾನ್ಸ್ ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 50 ವರ್ಷದ KSRP ಹೆಡ್ ಕಾನ್ಸ್ ಟೇಬಲ್ ನೇಣಿಗೆ ಶರಣಾಗಿದ್ದಾರೆ. 4 ನೇ ಬೆಟಾಲಿಯನ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ KSRP ಸಿಬ್ಬಂದಿ ಈ ಹಿಂದೆ ಇನ್ನೊಬ್ಬ ಸೋಂಕಿತ ಸಿಬ್ಬಂದಿಯೊಂದಿಗೆ ಸಪಂರ್ಕದಲ್ಲಿ ಇದ್ದ ಕಾರಣ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಜೂನ್ 20ರಂದು ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ನಿನ್ನೆ ಅದರ ವರದಿ ಬಂದಿದ್ದು, ವರದಿಯಲ್ಲಿ ಕಾನ್ಸ್ ಟೇಬಲ್ ಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ರಾತ್ರಿ ಬಸ್‍ನಲ್ಲಿ ಸಿವಿ ರಾಮನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯದಲ್ಲೇ ಬಸ್‍ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.