ಕೋಮಾದಲ್ಲಿ ಅಭಿಮಾನಿ ; ಆಸ್ಪತ್ರೆಗೆ ಭೇಟಿ ನೀಡಿದ ನಟ ಧ್ರುವ ಸರ್ಜಾ.

72
firstsuddi

ಸ್ಯಾಂಡಲ್‍ವುಡ್ ನಟ ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿ ಪೃಥ್ವಿರಾಜ್ ಬೈಕ್ ನಿಂದ ಬಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ.

ಫೆಬ್ರವರಿ 14 ರಂದು ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಬಳಿ ನಡೆದ ರಸ್ತೆ ಅಪಘಾತದಲ್ಲಿ ಪೃಥ್ವಿರಾಜ್ ತೀವ್ರ ಗಾಯಗೊಂಡಿದ್ದಾರೆ. ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ ಪರಿಣಾಮ, ಅವರ ತಲೆಗೆ ತೀವ್ರ ಪೆಟ್ಟಾಗಿದೆ. ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಮೆಮೊರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೆ ಪೃಥ್ವಿರಾಜ್ ಸಹಜ ಸ್ಥಿತಿಗೆ ಬರುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದಾರಂತೆ. ಹಾಗಾಗಿ ತಂದೆ ತಾಯಿ ಮಗನ ದೇಹ ದಾನಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಗನ ಕೊನೆಯ ಆಸೆ ಧ್ರುವ ಸರ್ಜಾರನ್ನು ನೋಡುವುದಾಗಿತ್ತಂತೆ. ಹಾಗಾಗಿ ಧ್ರುವ ಸರ್ಜಾ ಅವರಿಗೆ ಈ ವಿಷಯ ತಿಳಿಸಿದ್ದಾರೆ. ಧ್ರುವ ಅವರು ಇಂದು ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಪೃಥ್ವಿರಾಜ್ ಅವರ ತಂದೆ-ತಾಯಿ ಧ್ರುವ ಅವರ ಎದುರು ಕಣ್ಣೀರು ಹಾಕಿದ್ದಾರೆ. ಅವರನ್ನು ಧ್ರುವ ಸಮಾಧಾನ ಮಾಡಲು ಪ್ರಯತ್ನಿಸಿದರು.

ಪೃಥ್ವಿ ಅವರನ್ನು ತುಂಬಾ ಬಾರಿ ಭೇಟಿ ಮಾಡಿದ್ದೇನೆ. ಅವರ ತಂದೆ ತಾಯಿಗೆ ಎನು ಹೇಳಿ ಸಮಾಧಾನ ಮಾಡಬೇಕು ಎಂಬುದು ನನಗೆ ತಿಳಿಯುತ್ತಿಲ್ಲ. ಅವರ ತಂದೆ-ತಾಯಿ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಎಲ್ಲರಿಗೂ ನಾನು ರಿಕ್ವೆಸ್ಟ್ ಮಾಡೋದು ಏನಂದ್ರೆ ದಯವಿಟ್ಟು ಹೆಲ್ಮೆಟ್ ಧರಿಸಿ ಎಂದಿದ್ದಾರೆ ಧ್ರುವ ಸರ್ಜಾ.