ಕೋವಿಡ್-19 ಸೋಂಕಿನಿಂದ ಸುರಕ್ಷೆ ಹೊಂದಲು ಮಾಸ್ಕ್ ಮತ್ತು ಸಾನಿಟೈಸರ್ ಬಳಸುವುದು ಕಡ್ಡಾಯ : ಕೆ.ಸಿ.ರತನ್ ಕುಮಾರ್

251
firstsuddi

ಮೂಡಿಗೆರೆ: ಕೋವಿಡ್-19 ಸೋಂಕಿನಿಂದ ಸುರಕ್ಷೆ ಹೊಂದಲು ಮಾಸ್ಕ್ ಮತ್ತು ಸಾನಿಟೈಸರ್ ಕಡ್ಡಾಯವಾಗಿ ಬಳಸುವುದರಿಂದ ಸೋಂಕಿನಿಂದ ತಪ್ಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ಕುಮಾರ್ ಅವರು ಹೇಳಿದರು.
ತಾಲ್ಲೂಕು ಆಡಳಿತದಿಂದ ಮಾಸ್ಕ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಥ ಕಾರ್ಯಕ್ರಮಕ್ಕೆ ತಾ.ಪಂ. ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾವಿನ ಸಂಖ್ಯೆ ಹೇರತೊಡಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಸಭೆ ಸಮಾರಂಭದಿಂದ ದೂರವಿರಬೇಕು. ಪ್ರಾರ್ಥನಾ ಮಂದಿರ ತೆರೆಯಲು ಸರಕಾರ ಅನುಮತಿ ನೀಡಿದ್ದರೂ ಸುರಕ್ಷತಾ ದೃಷ್ಟಿಯಿಂದ ಪೂಜೆ ಪ್ರಾರ್ಥನೆಯಿಂದ ಸಾಧ್ಯವಾದಷ್ಟು ದೂರವಿದ್ದು, ಮನೆಯಲ್ಲೇ ಪೂಜೆ ನೆರವೇರಿಸಿಕೊಳ್ಳಬೇಕು. ಮಾಸ್ಕ್ ಮತ್ತು ಸಾನಿಟೈಸರ್‍ನ್ನು ಪ್ರತಿನಿತ್ಯ ಬಳಸುವುದರಿಂದ ಸೋಂಕಿನಿಂದ ರಕ್ಷಣೆ ಹೊಂದಲು ಸಾಧ್ಯವಿದೆ ಎಂದು ತಿಳಿಸಿದರು.
ತಾ.ಪಂ. ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರಾದ ಸುಂದರ್ ಕುಮಾರ್, ಭಾರತೀ ರವಿಂದ್ರ, ತಹಸೀಲ್ದಾರ್ ಎಚ್.ಎಂ.ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಸುಂದರೇಶ್, ಪ.ಪಂ.ಮುಖ್ಯಾಧಿಕಾರಿ ಕೃಷ್ಣೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತರಾಜ್ ಮತ್ತಿತರರು ಉಪಸ್ಥಿತರಿದ್ದರು.