ಕೋವಿಡ್‍ನಿಂದ ಮಕ್ಕಳು ಬಾಧಿತರಾಗಿದ್ದು, ಉತ್ತಮ ಪೌಷ್ಟಿಕ ಆಹಾರ ನೀಡಿ : ಸೋನಿಯಾ ಗಾಂಧಿ ಒತ್ತಾಯ…

59
firstsuddi

ನವದೆಹಲಿ: ಕೋವಿಡ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಅತೀ ಹೆಚ್ಚಿನ ಮಕ್ಕಳು ಬಾಧಿತರಾಗಿದ್ದು, ಅವರಿಗೆ ಈ ಸಂದರ್ಭದಲ್ಲಿ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರದ ಅಗತ್ಯವಿದೆ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಲೋಕಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಅವರು, ಸಾಂಕ್ರಾಮಿಕ ರೋಗದಿಂದಾಗಿ ಮಕ್ಕಳು ಹೆಚ್ಚು ಬಾಧಿತರಾಗಿದ್ದಾರೆ. ಶಾಲೆಗಳು ಮೊದಲು ಮುಚ್ಚಲ್ಪಟ್ಟವು ಮತ್ತು ಕೊನೆಯದಾಗಿ ತೆರೆಯಲ್ಪಟ್ಟವು. ಶಾಲೆಗಳು ಮುಚ್ಚಿದಾಗ ಮಧ್ಯಾಹ್ನದ ಊಟವೂ ಸ್ಥಗಿತಗೊಂಡಿತ್ತು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ಆದೇಶದ ಅಡಿಯಲ್ಲಿ ಜನರಿಗೆ ಪಡಿತರವನ್ನು ನೀಡಲಾಗಿದೆ. ಆದರೆ ಒಣ ಪಡಿತರ ಮತ್ತು ಮಕ್ಕಳಿಗೆ ಬೇಯಿಸಿದ ಊಟಕ್ಕೆ ಪರ್ಯಾಯವಿಲ್ಲ. ಮಕ್ಕಳ ಕುಟುಂಬಗಳು ಜೀವನೋಪಾಯಕ್ಕಾಗಿ ದೊಡ್ಡ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಇಂತಹ ಬಿಕ್ಕಟ್ಟು ಕಳೆದ ಕೆಲವು ವರ್ಷಗಳಲ್ಲಿ ಹಿಂದೆಂದೂ ಎದುರಿಸಿರಲಿಲ್ಲ. ಇದೀಗ ಶಾಲೆಗಳಿಗೆ ಮರಳುತ್ತಿರುವ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಅಗತ್ಯವಿದೆ ಎಂದಿದ್ದಾರೆ.